HEALTH TIPS

ಕೊಂಡೆವೂರಿನ ಸೋಮಯಾಗಕ್ಕೆ ಮಡಿಮಾಳ ಸಮುದಾಯದಿಂದ ದೀವಟಿಗೆ ತಯಾರಿಯ ಮುಹೂರ್ತ


          ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಲ್ಲಿ ಉಪಯೋಗಿಸಲಿರುವ ವಿವಿಧ ವಸ್ತುಗಳನ್ನು ಹಿಂದೂ ಸಮಾಜದ ವಿವಿಧ ಸಮುದಾಯಗಳವರು ತಮ್ಮ ಕುಲವೃತ್ತಿಯಂತೆ ತಯಾರಿ ಮಾಡುವ ಮುಹೂರ್ತ ನಡೆಯುತ್ತಿದ್ದು ಅದರಂತೆ "ಮಡಿವಾಳ ಸಮುದಾಯ"ದವರು ಯಾಗದಲ್ಲಿ ಬಳಸುವ ದೀವಟಿಗೆ ತಯಾರಿಸುವ ಮುಹೂರ್ತವನ್ನು ಬುಧವಾರ ಕರಿಂಜೆಯ ಶ್ರೀ ಮುಕ್ತಾನಂದ ಸರಸ್ವತೀ ಸ್ವಾಮೀಜಿಯವರ ಹಾಗೂ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯಉಪಸ್ಥಿತಿಯಲ್ಲಿ ಮೀಂಜ-ಅಮ್ಮೆನಡ್ಕದ ತರವಾಡು ಮನೆಯಲ್ಲಿ ನಡೆಸಿದರು. ಇಲ್ಲಿ ಉಪಸ್ಥಿತರಿದ್ದ ಮಡಿವಾಳ ಸಮಾಜ ಬಾಂಧವರು ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು. ಬಳಿಕ ಪೂಜೆ, ಮತ್ತು ಯತಿದ್ವಯರು ಸತ್ಸಂಗಗಳನ್ನು ನೆರವೇರಿಸಿದರು.
      ಕಾಸರಗೋಡು ಜಿಲ್ಲಾ ಅಗಸ ಯಾನೆ ಮಡಿವಾಳ ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಾಗ ಪ್ರಧಾನ ಸಮಿತಿಯ ಕೋಶಾಧಿಕಾರಿ ಶಶಿಧರ ಶೆಟ್ಟಿ ಗ್ರಾಮಚಾವಡಿ,  ಮೀಂಜ ಪಂಚಾಯತಿ ಯಾಗಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯ ಶೇಖರ್ ಬೇರಿಕೆ, ಸದಸ್ಯೆ ಶಾಲಿನಿ ಶೆಟ್ಟಿ, ಮಡಿವಾಳ ಸಮಾಜದ ಪ್ರಮುಖರಾದ ಗೋಪಾಲ ನಿಡಿಮಿಡಿ, ರಾಮ ಬಾರೆಕೂರು, ಚಂದ್ರಶೇಖರ್ ಕೋಡಿ ಉಪಸ್ಥಿತರಿದ್ದರು. ದಿನೇಶ್ ಅಮ್ಮೆನಡ್ಕ ಸ್ವಾಗತಿಸಿ, ಉದಯ ಮನ್ನಿಪ್ಪಾಡಿ ವಂದಿಸಿದರು. ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೆರುಗೋಳಿ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries