ಉಪ್ಪಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ವಾರ್ಷಿಕೋತ್ಸವ ಸಮಾರಂಭ ಹಾಗೂ ಉಚಿತ ಯಕ್ಷಗಾನ ತರಬೇತಿ ಹೊಂದಿದ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ವಿದ್ಯಾರ್ಥಿಗಳ ರಂಗಪ್ರವೇಶ ಇತ್ತೀಚೆಗೆ ಸಂಭ್ರಮದಿಂದ ಜರಗಿತು. ಯಕ್ಷ ಗುರು ರಾಮ ಸಾಲ್ಯಾನ್ ಮಂಗಲ್ಪಾಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ "ಸುದರ್ಶನ ವಿಜಯ" ಪ್ರಸಂಗ ಪ್ರಸ್ತುತ ಪಡಿಸಿದರು.
ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಶ್ರೀರಾಮ ಟ್ರಾನಸ್ಪೊರ್ಟ್ಸ್ ಫೈನೆನ್ಸ್ ಕಂಪೆನಿಯ ಸಂಸ್ಥೆಯ ಪ್ರಧಾನ ಪ್ರಬಂಧಕ ಶರತ್‍ಶ್ಚಂದ್ರ ಭಟ್ ಕಾಕುಂಜೆ, ಕೊಂಡೆವೂರು ವಿದ್ಯಾ ಪೀಠದ ನಿಕಟಪೂರ್ವ ಮುಖ್ಯ ಶಿಕ್ಷಕಿ ಪ್ರತಿಭಾ ಶ್ರೀಧರ್, ಭಾಗವಹಿಸಿದ್ದರು. ಯಕ್ಷಗಾನ ಗುರುಗಳಾದ ರಾಮಸಾಲ್ಯಾನ್ ಮಂಗಲ್ಪಾಡಿ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಅಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಉಪ್ಪಳ ಘಟಕದ ಘೌರವಾಧ್ಯಕ್ಷ ಪಿ.ಆರ್.ಶೆಟ್ಟಿ. ಪೊಯ್ಯೇಲು, ಅಧ್ಯಕ್ಷ ಸುರೇಶ ಶೆಟ್ಟಿ ಬಳಕ, ಹಾಗೂ ಗೌರವ ಸಲಹೆಗಾರರಾದ ಡಾ. ಶ್ರೀಧರ ಭಟ್, ಶ್ರೀಧರ ಶೆಟ್ಟಿ ಮುಟ್ಟಂ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಬಳಿಕ ಪ್ರಸಿದ್ದ ಕಲಾವಿದರಿಂದ "ಚೂಡಾಮಣಿ" ಯಕ್ಷಗಾನ ಪ್ರದರ್ಶನ ಗೊಂಡಿತು.