ಉಪ್ಪಳ: ಪೈವಳಿಕೆಯ ಸರಕಾರಿ ಪ್ರೌಢಶಾಲೆ ಕಾಯರ್ಕಟ್ಟೆ ಹಾಗೂ ಮಂಗಲ್ಪಾಡಿಯ ಬೇಕೂರು ಹೈಸ್ಕೂಲಿಗೆ ಕನ್ನಡ ಮಾಧ್ಯಮ ವಿಜ್ಞಾನ ಶಿಕ್ಷಕರಾಗಿ ರಾಜ್ಯ ಲೋಕಸೇವಾ ಆಯೋಗ ನೇಮಕಾತಿ ನೀಡಿದ ಮಲೆಯಾಳಿ ಶಿಕ್ಷಕರು ಶುಕ್ರವಾರ ಕತ9ವ್ಯಕ್ಕೆ ಆಗಮಿಸಿದ್ದು ಕನ್ನಡ ಪರ ಹೋರಾಟಗಾರರ ಪ್ರಬಲ ಪ್ರತಿಭಟನೆಯ ಬಳಿಕ ಹಿಂತಿರುಗಿದ್ದಾರೆ.
ಕಾಯರ್ಕಟ್ಟೆ ಶಾಲೆಗೆ ಶುಕ್ರವಾರ ಬೆಳಿಗ್ಗೆ ತಿರುವನಂತಪುರ ನಿವಾಸಿ ಆಗಮಿಸಿದಾಗ ಶಾಲಾ ರಕ್ಷಕ ಶಿಕ್ಷಕ ಸಂಘ ದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್ ಬಾಯಿಕಟ್ಟೆ ನೇತೃತ್ವದಲ್ಲಿ ಪ್ರತಿಭಟಿಸಿ ತಡೆಯಲಾಯಿತು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹಷಾ9ದ್ ವಕಾ9ಡಿ, ಸದಸ್ಯೆ ಫರಿದಾ ಝಕೀರ್, ಸ್ಥಳೀಯರಾದ ಹಮೀದ್ ಕುಂಞಲಿ ಮೊದಲಾದವರಿದ್ದರು.
ಬೇಕೂರು ಶಾಲೆಗ ತಿರುವನಂತಪುರದ ಮಹಿಳೆಯೊಬ್ಬರು ತ0ದೆ-ತಾಯಿ ಜೊತೆ ಆಗಮಿಸಿದಾಗ ಗೇಟಿನ ಬಳಿ ರಕ್ಷಕ ಶಿಕ್ಷಕ ಸಂಘದ ನೇತೃತ್ವದಲ್ಲಿ ತಡೆದು ಅಲ್ಲಿಂದಲೇ ಕಳಿಸಲಾಯಿತು.
ಎರಡೂ ಶಾಲೆಗಳಲ್ಲೂ 300 ಕ್ಕಿ 0ತ ಹೆಚ್ಚು ಕನ್ನಡ ವಿದ್ಯಾಥಿ9ಗಳಿದ್ದು ಮಲೆಯಾಳ ಮಾಧ್ಯಮದಲ್ಲಿ ಕಲಿಕೆ ಸಾಧ್ಯವಾಗದು. ಇದರಿ0ದ ಕಲಿಕೆಗೆ ವ್ಯತಿರಿಕ್ತ ಪರಿಣಾಮವಾಗುವುದು. ಜೊತೆಗೆ ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗುವುದು. ವಿದ್ಯಾಥಿ9ಗಳ ಬೋಧನೆಗೆ ದಿನ ವೇತನ ಆಧಾರದಲ್ಲಿ ಕನ್ನಡ ಶಿಕ್ಷಕ ನೇಮಕಾತಿಯನ್ನು ನಾವು ನಡೆಸುವೆವು ಎ0ದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳು ತಿಳಿಸಿದ್ದಾರೆ.