ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ 2009-10ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಭಾನುವಾರ ಹಳೆ ವಿದ್ಯಾರ್ಥಿ ಸಂಗಮ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಾರಾಯಣ ಶರ್ಮಾ ಬಳ್ಳಪದವು, ನಾಗರಾಜ ಬಿ, ಧರ್ಮಶೀಲಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ಕಲಾವತಿ, ರಮ್ಯಾ, ಶ್ರೀಜಾ, ಸವಿತಾ, ಸತೀಶ್, ನಿತ್ಯಾನಂದ,ಶಶಿಕಾಂತ್ ಬಲ್ಲಾಳ್, ಹರಿನಾರಾಯಣ, ನಾಗರಾಜ, ಉದಯ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಗದ ವತಿಯಿಂದ ಶಾಲೆಗೆ 20ರಷ್ಟು ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಚಂದ್ರಹಾಸ ಸ್ವಾಗತಿಸಿ, ವಿನೋದ್ ವಂದಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.