ಕುಂಬಳೆ: ಮುಗು ಶ್ರೀಸುಬ್ರಾಯ ದೇವ ದೇವಸ್ಥಾನದ ಕಿರುಷಷ್ಠಿ ಮಹೋತ್ಸವವದ ಅಂಗವಾಗಿ ನಡೆದ
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯಕ್ಷ ಮಿತ್ರರು ಮುಗು ಆಯೋಜನೆಯಲ್ಲಿ ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ
ಕಲಾಮಂಡಳಿಯವರಿಂದ ಯಕ್ಷಗಾನ ಬಯಲಾಟ ಕನಕಾಂಗಿ ಕಲ್ಯಾಣ-- ರಕ್ತರಾತ್ರಿ ಕಥಾಭಾಗದ ಪ್ರದರ್ಶನ ನಡೆಯಿತು.
ಮುಗು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶ್ರೀಷಣ್ಮುಖ ಮಿತ್ರ ವೃಂದ ಮುಗು ಇವರು ಯಕ್ಷಗಾನ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಯಕ್ಷಗಾನದಲ್ಲಿ ಅಶ್ವತ್ಥಾಮನ ಪಾತ್ರವನ್ನು ನಿರ್ವಸಿ ಜನಮೆಚ್ಚುಗೆ ಪಾತ್ರವಾದ ಹಿರಿಯ ಕಲಾವಿದ ಗುಂಡಿಮಜಲು ಗೋಪಾಲ ಭಟ್ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.