ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರದ ಅಂಗವಾಗಿ ಸಾಮೂಹಿಕ ತರಕಾರಿ ಬೀಜ ಬಿತ್ತನೆ ಕೆಲಸ ನಡೆಯಿತು.
ಈ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್ ಉದ್ಘಾಟಿಸಿದರು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ, ಕುಂಟಾರು ಶಾಲೆಯ ವ್ಯವಸ್ಥಾಪಕ ಜಗದೀಶ್ ಮಾಸ್ತರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಗಫೂರ್, ಪ್ರಾಂಶುಪಾಲ ಮೆಜೋ ಜೋಸೆಫ್, ಶಿಕ್ಷಕಿ ಲತಾಕುಟ್ಟಿ, ಕುಂಟಾರು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರನ್, ಯೋಜನಾ ಅಧಿಕಾರಿ ಪ್ರೀತಂ ಮೊದಲಾದವರು ಭಾಗವಹಿಸಿದ್ದರು.