ಬದಿಯಡ್ಕ: ಶಿಕ್ಷಣವು ಕೌಶಲ್ಯಾಧಾರಿತವಾಗುವ ಮೂಲಕ ಖಾಸಗೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದೊಡ್ಡ ಸವಾಲು ಎದುರುಗಾತ್ತಿದೆ ಎಂಬುದಾಗಿ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಅವರು ಹೇಳಿದರು.
ಅವರು ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ `ವಸಂತೋತ್ಸವ' ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿಸ್ತು ಬದ್ದ ಶಿಕ್ಷಣವೊಂದಿಗೆ ವಿದ್ಯಾರ್ಥಿಗಳ ಸಮಾಜಮುಖೀ ಏಳಿಗೆಗೆ ಮಗುವಿನ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸವೇ ಶಿಕ್ಷಣ ಮೂಲಕ ಲಭಿಸಬೇಕು. ಅದುವೇ ಶಿಕ್ಷಣದ ಹೊಸ ವ್ಯಾಖ್ಯಾನವಾಗಿದೆ. ಕೇವಲ ಪಾಠ ಪಠ್ಯಗಳಲ್ಲದೇ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಉತ್ತೇಜನ ನೀಡುವುದರೊಂದಿಗೆ ಸಮಗ್ರ ಬದಲಾವಣೆಯಾಗುತ್ತಿದೆ. ಆ ನಿಟ್ಟಿನಲ್ಲಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಯು ಉತ್ತಮ ಶಿಸ್ತುಬದ್ಧ ಶಿಕ್ಷಣ ನೀಡುವಲ್ಲಿ ಮಾದರಿಯಾಗಿದೆ ಎಂಬುದಾಗಿ ಅವರು ಹೇಳಿದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಕಾರಿ ಕೈಲಾಸ ಮೂರ್ತಿ ಮಾತನಾಡಿ, ಉತ್ತಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿಸುತ್ತದೆ. ಜ್ಞಾನಕೆ ಸಾದೃಶವಾದದ್ದು ಬೇರೊಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೂ, ಇಂಗ್ಲೀಷ್ ಭಾಷೆಯನ್ನು ಅವಗಣಿಸುವಂತಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ಪಠ್ಯಗಳಲ್ಲಿ ಪರಿಣಿತಿಯನ್ನು ಪಡೆಯದೇ ಎಲ್ಲಾ ವಲಯಗಳಲ್ಲೂ ತನ್ನ ಸಾಮಥ್ರ್ಯವನ್ನು ತೋರ್ಪಡಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ವರದಿ ಮಂಡಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಣೇಶ ಪೈ ಬದಿಯಡ್ಕ, ಮಾತೃ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪ್ರಮೀಳಾ, ರಾಜಗೋಪಾಲ ಚುಳ್ಳಿಕ್ಕಾನ ಮಾತನಾಡಿದರು. ಆರಂಭದಲ್ಲಿ ನಿತೀಶ್ ಸ್ವಾಗತಿಸಿ, ವೈಷ್ಣವಿ ಭಟ್ ವಂದಿಸಿದರು. ರತ್ನಮಾಲ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ಕಾರ್ಯಕ್ರಮದಂಗವಾಗಿ ಬೆಳಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ಪೈ ಬದಿಯಡ್ಕ ಧ್ವಜಾರೋಹಣಗೈದರು. ಸಮಾರಂಭದಲ್ಲಿ ಕಳೆದ ಶೈಕ್ಷಣಿಕ ಶಾಲಿನಲ್ಲಿ ಪ್ರತೀ ತರಗತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ವರ್ಣಾಂಕುರ ಪ್ರಶಸ್ತಿಯನ್ನು ವಿದ್ಯಾರ್ಥಿನಿ ವೈದೇಹಿಗೆ ನೀಡಿ ಗೌರವಿಸಿದರು. ಉಪಜಿಲ್ಲಾ ವಿದ್ಯಾಕಾರಿ ಕೈಲಾಸ ಮೂರ್ತಿ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಗೆಜ್ಜೆಕಟ್ಟಿ, ಬಣ್ಣಬಳಿದು ವೇದಿಕೆಯಲ್ಲಿ ತನ್ನ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದರು. ಮುದ್ರಿತ ಧ್ವನಿಸುರುಳಿಯನ್ನು ಬಳಸದೆ ಮಕ್ಕಳು ಹಿನ್ನೆಲೆ ಗಾಯನದಲ್ಲೂ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ನೆರೆದ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಭರತನಾಟ್ಯ, ಜಾನಪದ ನೃತ್ಯ, ವಿವಿಧ ಭಾಷೆಗಳ ನಾಟಕಗಳು, ಯೋಗ, ಯಕ್ಷಗಾನ ಮೊದಲಾದ ಭಾರತೀಯ ಸಂಸ್ಕøತಿಗನುಗುಣವಾದ ಕಾರ್ಯಕ್ರಮ ನಡೆಯಿತು.