ಕುಂಬಳೆ: ಪವಿತ್ರ ಶಬರಿಮಲೆಯ ಆಚಾರ ಬುಡಮೇಲುಗೊಳಿಸಲು ವಾಮಮಾರ್ಗ ಹಿಡಿದ ಸಿಪಿಎಂ ಸರಕಾರದ ನೀತಿಯನ್ನು ಖಂಡಿಸಿ ಶಬರಿಮಲೆ ಕ್ರಿಯಾಸಮಿತಿಯ ನೇತೃತ್ವದಲ್ಲಿ ಹರತಾಳದ ಹಿನ್ನಲೆಯಲ್ಲಿ ಕುಂಬ್ಳೆಯಲ್ಲಿ ಗುರುವಾರ ಬಿಜೆಪಿ, ಶಬರಿಮಲೆ ಅಯ್ಯಪ್ಪ ಭಕ್ತ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.
ಬೃಹತ್ ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ ಕುಮಾರ ಶೆಟ್ಟಿ ಪೂಕಟ್ಟೆ ಉದ್ಘಾಟಿಸಿದರು. ಮುರಳೀಧರ ಯಾದವ್ ನಾಯ್ಕಾಪು ಮಾತಾಡಿದರು. ಸಂಘ ಪರಿವಾರದ ನೇತಾರರಾದ ದಿನೇಶ್ ಆರಿಕ್ಕಾಡಿ, ದಿನೇಶ್ ಬಂಬ್ರಾಣ, ರಮೇಶ್ ಭಟ್ ಕುಂಬಳೆ, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಶಂಕರ ಆಳ್ವ, ಸುಧಾಕರ ಕಾಮತ್ ,ಹರೀಶ್ ಗಟ್ಟಿ, ಸುಜಿತ್, ಸುರೇಶ ಶಾಂತಿಪಳ್ಳ, ಪ್ರೇಮ ಶೆಟ್ಟಿ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಹಾಗು ಮಾತೆಯರು ಭಾಗವಹಿಸಿದರು.ವಸಂತಿ ಸ್ವಾಗತಿಸಿ, ಸಂದೀಪ್ ಗಟ್ಟಿ ವಂದಿಸಿದರು.