HEALTH TIPS

ಶ್ರೀಮಂತ ವರ್ಷ: ಅನಿವಾಸಿ ಕೇರಳಿಗರು ಕೊಲ್ಲಿಯಿಂದ ನಾಡಿಗೆ ರವಾನಿಸಿದ ಒಟ್ಟು ಹಣ ಎರಡು ಸಾವಿರ ಶತ ಕೋಟಿ ರೂ.


               ಗಲ್ಫ್ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳಿಗರಿಂದ ಕಳೆದ ಐದು ವರ್ಷಗಳಿಂದೀಚೆಗೆ ಈ ಸಾಧನೆ
     ಕಾಸರಗೋಡು: ಕೇರಳದ ಆರ್ಥಿಕತೆಗೆ ರಹದಾರಿಯಾಗಿರುವ ಕೊಲ್ಲಿ ರಾಷ್ಟ್ರಗಳಿಂದ ನಾಡಿಗೆ ರವಾನಿಸಲ್ಪಟ್ಟ ಹಣದ ಕಳೆದ ಐದು ವರ್ಷಗಳಲ್ಲಿ ಈ ಬಾರಿ ದುಪ್ಪಟ್ಟಾಗಿದೆ. 2019 ರಲ್ಲಿ ರಾಜ್ಯದಲ್ಲಿ ಗಲ್ಫ್ ಹಣದ ಹೊಳೆಯೇ ಹರಿಯುವ ನಿರೀಕ್ಷೆಯಿದೆ! ಕೊಲ್ಲಿ ರಾಷ್ಟ್ರದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವ ಕೇರಳಿಗರಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ಅನಿವಾಸಿಗರು ತಾವು ದುಡಿದ ಹಣದ ಅರ್ಧದಷ್ಟನ್ನು ನಾಡಿಗೆ ರವಾನಿಸುವ ಮೂಲಕ ಹೊಸ ಸಾಧನೆಯನ್ನು ಮಾಡಿದ್ದಾರೆ. ಅರ್ಧ ಶತಮಾನಕ್ಕಿಂತ ಹಿಂದಿನಿಂದಲೂ ಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗ ಅರಸಿ ತೆರಳುತ್ತಿರುವ ಕೇರಳಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡರೂ, ಹಣ ರವಾನೆ ಪ್ರಮಾಣವು ಇಮ್ಮಡಿಯಾಗುತ್ತಲಿದೆ. 2018 ಸೆಪ್ಟೆಂಬರ್ ತನಕ ಯು.ಎ.ಇ, ಸೌದಿ ಅರೇಬಿಯಾ, ಬಹರೈನ್, ಒಮಾನ್ ಸಹಿತ ಇತರೆ ಕೊಲ್ಲಿ ರಾಷ್ಟ್ರದಿಂದ ಕೇರಳಕ್ಕೆ ತಲುಪಿದ ಗಲ್ಫ್ ಹಣದ ಒಟ್ಟು ಮೊತ್ತ 1,81,623 ಕೋಟಿ ರೂ. ಆಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕೇರಳಕ್ಕೆ ಹರಿದು ಬಂದ ಹಣದ ಪ್ರಮಾಣ ಎರಡು ಸಾವಿರ ಶತ ಕೋಟಿ ರೂ. ದಾಟಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲವು ದಶಕಗಳಿಂದ ರಾಜ್ಯದ ಆರ್ಥಿಕತೆಯ ಆಧಾರ ಸ್ಥಂಬವೆನ್ನುವಂತಿರುವ್ತನಿವಾಸಿ ಹಣ ರವಾನೆ ಪ್ರಕ್ರಿಯೆಯು ಅಡೆತಡೆಗಳಿಲ್ಲದೆ ಮುಂದುವರಿಯುತ್ತಿದೆ. ಕೇರಳಿಗರು ದುಡಿದ ವಿದೇಶಿ ಹಣದ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2015 ನೇ ಆರ್ಥಿಕ ವರ್ಷದಲ್ಲಿ ವಿದೇಶಿ ಹಣ ವಿನಿಯಮವು ಒಂದು ಸಾವಿರ ಶತ ಕೋಟಿ ಗಡಿಯನ್ನು ಮೊದಲ ಬಾರಿಗೆ ದಾಟಿತ್ತು. ಈ ಸಾಧನೆಗೆ ಕೇರಳಿಗರು ಐವತ್ತು ವರ್ಷ ಕಾಯಬೇಕಾಯಿತು. ಕೊಲ್ಲಿ ರಾಷ್ಟ್ರದಲ್ಲಿ ಭಾರತೀಯರಿಗೆ ಉದ್ಯೋಗ ಕಡಿತ, ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗದ ಅವಕಾಶವನ್ನು ಸೃಷ್ಠಿಸುವ ನಡೆಯೇ ಹೆಚ್ಚಿನ ಹಣ ರವಾನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಅರ್ಧ ಆರ್ಥಿಕ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕೇರಳ ವಿವಿಧ ಬ್ಯಾಂಕುಗಳಿಗೆ ಬಂದು ಸೇರಿದ ಹಣದ ಒಟ್ಟು ಮೊತ್ತ 1,82,623 ಕೋಟಿ ರೂ. ಆಗಿದೆ. ಕಳೆದ ಆರ್ಥಿಕ ವರ್ಷದ ಮಾರ್ಚ್ ತಿಂಗಳ ತನಕ ಒಟ್ಟು ಸೇರಿದ ಹಣ 1,69,944 ಕೋಟಿ ರೂ. 2018 ಜೂನ್ ತಿಂಗಳಲ್ಲಿ ಈ ಮೊತ್ತ 1,76,098 ಕೋಟಿ ರೂ. ದಾಟಿತ್ತು. ಕೊಲ್ಲಿ ರಾಷ್ಟ್ರಗಳಿಂದ ಹಣ ರವಾನೆಯು 3.67 ಪ್ರತಿಶತ ಹೆಚ್ಚಾಗಿದೆ ಎಂದು ರಾಜ್ಯ ಬ್ಯಾಂಕ್ ಅಧೀಕ್ಷಕರ ಸಭಾ ವರದಿಯ ಅಂಕಿ ಅಂಶಗಳು ತಿಳಿಸುತ್ತವೆ. 2019 ರಲ್ಲಿ ಕೊಲ್ಲಿ ರಾಷ್ಟ್ರದಿಂದ ಕೇರಳಕ್ಕೆ ರವಾನಿಸಲ್ಪಡುವ ಹಣವು ಎರಡು ಸಾವಿರ ಶತ ಕೋಟಿ ರೂಪಾಯಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಕೇರಳದ ಆರ್ಥಿಕತೆಗೆ ಹಾಗೂ ಜಿಡಿಪಿ ವೃದ್ಧಿಗೆ ಕಾರಣವಾದ ವಿದೇಶಿ ವಿನಿಮಯ, ವಿತ್ತೀಯತೆ ಹೊಸ ಹೂಡಿಕೆ ಮತ್ತು ಆರ್ಥಿಕತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. 
    ಏನಂತಾರೆ:
  ಯು.ಎಸ್ ಡಾಲರ್ ಶಕ್ತಿ ವೃದ್ಧಿಯಿಂದ ಅನಿವಾಸಿ ಭಾರತೀಯರು ಹೆಚ್ಚಿನ ಹಣವನ್ನು ನಾಡಿಗೆ ಮರಳಿಸಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಂದ ಸ್ವದೇಶಕ್ಕೆ ಹಣ ರವಾನೆ ಕಾರ್ಯವು ಪ್ರಸ್ತುತ ಕ್ಷಿಪ್ರಗತಿಯಲ್ಲಿ ಆಗುತ್ತಿದೆ. ದೇಶಕ್ಕೆ ಒಳಮುಖ ಹಣದ ರವಾಣೆಯಿಂದ ಹೂಡಿಕೆ, ಉದ್ಯೋಗ ಸೃಷ್ಠಿ ಅವಕಾಶಗಳು ಸಾಧ್ಯವಾಗಲಿವೆ.
            ಪ್ರಮೋತ್ ಮಾಂಗಾತ್ತ್
         ಯು.ಎ.ಇ ಎಕ್ಸ್‍ಚೇಂಜ್ ಸಿ.ಇ.ಒ ಮತ್ತು ಪ್ರಧಾನ ಪ್ರಬಂಧಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries