HEALTH TIPS

ನೃತ್ಯ ಮತ್ತು ಸಂಗೀತಕ್ಕೆ ಬೇರ್ಪಡಿಸಲಾಗದ ಸಂಬಂಧವಿದೆ- ವೆಂಕಟಲಕ್ಷ್ಮಿ

 
        ಬದಿಯಡ್ಕ: ನೃತ್ಯ ಮತ್ತು ಸಂಗೀತಕ್ಕೆ ಬೇರ್ಪಡಿಸಲಾಗದ ಸಂಬಂಧವಿದೆ. ಒಂದು ಇನ್ನೊಂದನ್ನು ಪರಿಪೂರ್ಣವಾಗಿಸುತ್ತದೆ. ನೃತ್ಯ ಎಂದರೆ ಲಯಬದ್ಧವಾದ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಈ ಪವಿತ್ರವಾದ ಶಾಸ್ತ್ರೀಯ ಕಲೆಯ ಕುರಿತಾದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವುದೆಂದರೆ ಮಹತ್ವಪೂರ್ಣವಾದ ಒಂದು ಅನುಭವವನ್ನು ಕಲಾಭಿಮಾನಿಗಳಿಗೆ ಉಣಬಡಿಸಿದಂತೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು.
       ಅವರು ವಿದುಷಿ ಯೋಗೀಶ್ವರೀ ಜಯಪ್ರಕಾಶ್ ನಿರ್ದೇಶನದ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯಲ್ಲಿ ಭಾನುವಾರ ಆಯೋಜಿಸಲಾದ ನೃತ್ಯ ಸಂಗೀತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
      ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡಿ ಬೆಳೆಸುವುದರೊಂದಿಗೆ ಜಗತ್ತಿಗೆ ವಿಶೇಷವಾಗಿ ಪರಿಚಯಿಸಲು ಭಾರತೀಯ ಸಾಂಸ್ಕøತಿಕ ಕಲೆಗಳನ್ನು ಮನನ ಮಾಡಿಸುವುದೂ ಅಷ್ಟೇ ಮುಖ್ಯ. ಜೀವನದಲ್ಲಿ ಹಿರಿಯರಿಗೆ ಗೌರವ ಕೊಡುವ ಮತ್ತು ಕಿರಿಯರನ್ನು ಕೈಹಿಡಿದು ಮುನ್ನಡೆಸುವ ವಿಶಾಲ ಮನೋಭಾವ ಬೆಳೆಸಬೇಕು. ಇಲ್ಲಿ ನೃತ್ಯದ ಮೂಲಕ ಯೋಗೀಶ್ವರಿಯವರು ಭಾರತೀಯ ಸಂಸ್ಕøತಿ ಹಾಗೂ ಶಿಸ್ತುಬದ್ಧ ಹಾದಿಯನ್ನು ತೋರುವ ಕಲೆಯನ್ನು ದಾರೆಯೆರೆಯುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು ಎಂದು ಸಲಹೆಯನ್ನಿತ್ತರು.
       ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದಿಯಡ್ಕ ಪಂಚಾಯತು ಮಾಜಿ ಸದಸ್ಯ ಮಹೇಶ ವಳಕುಂಜ, , ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ರೇಶ್ಮಾ ಸುನಿಲ್ ನಾರಂಪಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
     ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ನಿರ್ಧೇಶನದಲ್ಲಿ ಖ್ಯಾತ ಗಾಯಕ ವಸಂತ ಗೋಸಾಡ ಕಾರ್ಯಗಾರದ ನೇತೃತ್ವವಹಿಸಿದರು. ಈ ಸಂದರ್ಭದಲ್ಲಿ   ನಾಟ್ಯಾಲಯದ ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೂಪ ಮತ್ತು ಹರ್ಷಿತ ಪ್ರಾರ್ಥನೆ ಹಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries