ಬದಿಯಡ್ಕ: ಮಕ್ಕಳಿಗೆ ತಮ್ಮ ಸಾಮಥ್ರ್ಯ ಕಂಡುಕೊಳ್ಳಲು ಸ್ವಯಂ ರಕ್ಷಣೆಯೊಂದಿಗೆ ಹಕ್ಕುಗಳ ಅರಿವುಗಳಿಸಲು ಮಾರ್ಗದರ್ಶಿ ಶಿಬಿರವು ಸಹಕಾರಿಯಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಪೆರಡಾಲ ಸರಕಾರಿ ಪ್ರೌಢ ಶಾಲಾ ಮಕ್ಕಳ ಸ್ಮಾರ್ಟ್ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ರಕ್ಷಕರು ಮತ್ತು ಶಿಕ್ಷಕರು ಮಕ್ಕಳ ದೈನಂದಿನ ಚಟುವಟಿಕೆ ಗಮನಿಸಿ ಸಕಾರಾತ್ಮಕ ದೃಷ್ಟಿಕೋನ ಬೆಳೆಸಲು ಪೆÇ್ರೀತ್ಸಾಹಿಸಬೇಕು ಎಂದು ಅವರು ಹೇಳಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಪೆÇಲೀಸ್ ಠಾಣಾ ಸಬ್ ಇನ್ಸ್‍ಪೆಕ್ಟರ್ ಮೆಲ್ವಿನ್ ಜೋಸ್, ಕಾಸರಗೋಡು ಜಿಲ್ಲಾ ಶಿಶು ಸಂರಕ್ಷಣಾ ಸಮಿತಿ ಅಧಿಕಾರಿ ಬೈಜು, ಶಾಲಾ ಎಸ್.ಆರ್.ಜಿ.ಸಂಚಾಲಕ ಚಂದ್ರಪ್ರಭಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿ, ಶಾಲಾ ಒ.ಆರ್.ಸಿ. ಸಂಯೋಜಕ ಗಿರೀಶ್ ವಂದಿಸಿದರು. ತರಬೇತುದಾರ ಬಿಜು ಜೋಸೆಫ್ ಸಂಪನ್ಮೂಲ ವ್ಯಕ್ತಿಯಾಗಿ ಚಟುವಟಿಕೆಗಳನ್ನು ನಿರ್ವಹಿಸಿದರು.
ಜವಾಬ್ದಾರಿಯುತ ಶಿಕ್ಷಕ, ರಕ್ಷಕರಾಗಿ ಮಕ್ಕಳ ಬಾಲ್ಯ ಕಾಲದ ಮನಸ್ಥಿತಿ ಅರಿತು ಸಮಾಜದೊಂದಿಗೆ ಆರೋಗ್ಯಯುತ ಸಂಬಂಧ ಬೆಳೆಸಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವ ಮಾರ್ಗದರ್ಶನವೀಯುವ ದ್ವಿದಿನ ಶಿಬಿರ ಯಶಸ್ವಿಯಾಗಿ ನಡೆಯಿತು. ಕೇರಳ ಸರಕಾರದ ಶಿಕ್ಷಣ, ಆರೋಗ್ಯ, ಗೃಹ, ಶಿಶುಕ್ಷೇಮ, ಸ್ಥಳೀಯಾಡಳಿತ ಇಲಾಖೆಗಳ ಸಂಯೋಜಿತ ಸಹಕಾರವಿದೆ. ಶಾಲಾ ಶಿಕ್ಷಕರಾದ ಗೋಪಾಲಕೃಷ್ಣ ಭಟ್, ಬಿನೋಯ್, ದಿವ್ಯಗಂಗಾ, ಬೀನಾ, ಸುಹೈಲ್, ಚಂದ್ರಶೇಖರ, ಚಂದ್ರಾವತಿ, ಜಯಲತಾ ಸಹಕರಿಸಿದರು.