ಮಂಜೇಶ್ವರ: ಜಲಾಶಯಗಳ ಸಮೃದ್ಧಿ ಇದ್ದೂ ಬೇಸಗೆಯಲ್ಲಿ ನೀರಿನ ಬರ ಅನುಭವಿಸಬೇಕಾದ ದುಸ್ಥಿತಿ ಇರುವಾಗ ಜಲಾಶಯ ಸಂರಕ್ಷಣೆಗೆ ಸೃಜನಾತ್ಮಕ ಯೋಜನೆ ರಚಿಸಿ ಮಂಜೇಶ್ವರ ಬ್ಲ್ಲಾಕ್ ಪಂಚಾಯತ್ ಕಾರ್ಯರೂಪಕ್ಕಿಳಿದಿದೆ.
ಹರಿತ ಕೇರಳ ಮಿಷನ್ ಅಂಗವಾಗಿ ಜಲ-ಜೈವಿಕ ವೈವಿಧ್ಯ ಸಂರಕ್ಷಣೆ, ಪರಿಸರಕ್ಕೆ ಪೂರಕವಾಗಿ ಜಲಾಶಯಗಳನ್ನು ಬಳಸುವ ಮೂಲಕ ಬ್ಲಾಕ್ ಪಂಚಾಯತ್ ಗಮನ ಸೆಳೆದಿದೆ. ಇದರ ಅಂಗಾಗಿ 180 ಕೋಟಿ ರೂ.ನ ವಿಸ್ತೃತ ಜಲಾಶಯ ಸಂರಕ್ಷಣೆ ಯೋಜನೆಗೆ ಬ್ಲಾಕ್ ಪಂಚಾಯತ್ ಮಂಜೂರಾತಿ ನೀಡಿದೆ.
ಪರಂಪರಾಗತ ತೊರೆಗಳು, ಕೆರೆಗಳು ಇತ್ಯಾದಿಗಳ್ನು ಶುಚೀಕರಿಸುವುದು, ಕಿರು ಅಣೆಕಟ್ಟು, ತಡೆಗೋಡೆ ಇತ್ಯಾದಿಗಳನ್ನು ನಿರ್ಮಿಸುವುದು ಇತ್ಯಾದಿಗಳಿಗೆ ಯೋಜನೆ ರಚಿಸಲಾಗುವುದು. ಭೂಗರ್ಭ ಜಲ ಸಂರಕ್ಷಣೆ, ಕೃಷಿ ಹೆಚ್ಚಳ, ಕುಡಿಯುವ ನೀರು ಬರ ಪರಿಹಾರ ಇತ್ಯಾದಿಗಳಿಗೆ ಈ ಯೋಜನೆ ಪೂರಕವಾಗಲಿದೆ. ಮಣ್ಣು-ನೀರು ಸಂರಕ್ಷಣೆ ಈ ನಿಟ್ಟಿನಲ್ಲಿ ಪ್ರದಾನವಾಗಿ ನಡೆಯಲಿದೆ. ಸುರಂಗ, ಕುದುರು, ಕಾಡು, ಬನ ಇತ್ಯಾದಿಗಳ ಸಂರಕ್ಷಣೆ, ಜಲಾಶಯಗಳಿಗೆ ಬದಿ, ಜೈವಿಕ ಬೇಲಿ ಸಹಿತ 79 ಕಿರು ಯೋಜನೆಗಳಿಗೆ ಬ್ಲಾಕ್ ಪಂಚಾಯತ್ ರಚನೆ ನೀಡಲಿದೆ.
ಕುಕ್ಕಾರು, ಕುಬಣೂರು, ಮುಟ್ಟಂ, ಇಚ್ಲಂಗೋಡು, ಹೇರೂರು, ಉಪ್ಪಳ, ಬೇಕೂರು, ಮಜಿಬೈಲ್, ಮೂಡಂಬೈಲ , ಕಡಂಬಾರ್, ಕುಳೂರು, ಬೆರಿಪದವು, ಕೋಳಿಯೂರು, ಅಂಗಡಿಮೊಗರು ಸಹಿತ ಪ್ರದೇಶಗಳ ಜಲಾಶಯಗಳ ಪುನಶ್ಚೇತನ ನಡೆಸಲು ಉದ್ದೇಶಗಳಿವೆ.
* ತೀವ್ರ ಬರ ಅನುಭವಿಸುವ ಜಿಲ್ಲೆ ಎಂಬ ಕುಖ್ಯಾತಿಗೆ ಜಿಲ್ಲೆ ಒಳಗಾಗುವ ಭೀತಿಯಿರುವ ಸಂದರ್ಭ ನೈಸರ್ಗಿಕ ಜಲಾಶಯಗಳ ಪುನಶ್ಚೇತನ ಯೋಜನೆಗಳು ಪೂರಕವಾಗಲಿವೆ.
- ಎ.ಕೆ.ಎಂ.ಅಶ್ರಫ್,
ಅಧ್ಯಕ್ಷ,
ಮಂಜೇಶ್ವರ ಬ್ಲಾಕ್ ಪಂಚಾಯತ್.
* 5 ವರ್ಷದ ಅವ„ಯಲ್ಲಿ ಈ ಯೋಜನೆಗಳ ಪೂರ್ತಿಕರಣದ ನಿರೀಕ್ಷೆಯಿದೆ. ಈ ಯೋಜನೆ ಜಾರಿಯೊಂದಿಗೆ ಮಂಜೇಶ್ವರದ ಜನತೆಯ ಅನೇಕ ವರ್ಷಗಳ ಕನಸು ನನಸಾಗಲಿದೆ.
- ಕೆ.ಎನ್.ಸುಗುಣನ್,
ಸಹಾಯಕ ಎಂಜಿನಿಯರ್
ಕಿರು ನೀರಾವರಿ ಇಲಾಖೆ.