ಪೆರ್ಲ:ಎಣ್ಮಕಜೆ ಗ್ರಾ.ಪಂ.ಕಜಂಪಾಡಿಯಲ್ಲಿ ಬಾಲಸಭೆ ಅಂಗವಾಗಿ ವಿವಿಧ ಸ್ಪರ್ಧೆಗಳು ಇತ್ತೀಚೆಗೆ ನಡೆದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಸದಸ್ಯೆ ರೂಪಾವಾಣಿ ಆರ್.ಭಟ್ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನೆಲ್ಲಾ ಸದುಪಯೋಗ ಪಡಿಸಿ ಪಾಠದ ಜತೆಗೆ ಇತರ ಎಲ್ಲಾ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಮಾಡಲು ಬಾಲಸಭೆ ಸಹಾಯಕಾರಿ ಎಂದರು.ಎಡಿಎಸ್ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದರು.ಸಿಡಿಎಸ್ ಸದಸ್ಯೆ ಉದಯ ಕುಮಾರಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ವಂದಿಸಿದರು.
ಮಕ್ಕಳಿಗೆ ರಸಪ್ರಶ್ನೆ, ಸ್ಮರಣ ಶಕ್ತಿ ಪರೀಕ್ಷೆ, ಪೆನ್ಸಿಲ್ ಡ್ರಾಯಿಂಗ್, ಸಂಗೀತ ಕುರ್ಚಿ ಮತ್ತಿತರ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ರೂಪವಾಣಿ ಆರ್.ಭಟ್ ಬಹುಮಾನ ವಿತರಿಸಿದರು.