ಕಾಸರಗೋಡು: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೋಷ್ಯಲ್ ಡಿಫೆನ್ಸ್ ಸಹಕಾರದೊಂದಿಗೆ ಕಾಸರಗೋಡು ಕೇಂದ್ರೀಯ ವಿವಿಯ ಸಮಾಜ ಚಟುವಟಿಕೆ ವಿಭಾಗದಲ್ಲಿ ಮಾದಕ ಪದಾರ್ಥ ಬಳಕೆ ತಡೆಯಲ್ಲಿ ಸಾರ್ವಜನಿಕ-ಖಾಸಗಿ-ಸ್ವಯಂಸೇವಾ ಸಂಘಟನೆಗಳ ಸಂಯೋಜಿತ ಚಟುವಟಿಕೆ ಎಂಬ ವಿಷಯದಲ್ಲಿ ರಾಷ್ಟ್ರೀಯ ಮಟ್ಟದ (ಎರಡು ದಿನಗಳ) ವಿಚಾರ ಸಂಕಿರಣ ಜ.7 ಮತ್ತು 8ರಂದು ನಡೆಯಲಿದೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸುವವರಿಗಾಗಿ ಫೆÇೀಟೋಗ್ರಾಫಿ, ಸ್ಕಿಟ್ ಸ್ಪರ್ಧೆಗಳು ನಡೆಯಲಿವೆ. ವಿವಿ ಉಪಕುಲಪತಿ ಡಾ.ಜಿ.ಗೋಪಕುಮಾರ್ ಉದ್ಘಾಟಿಸುವರು.