ಮಂಜೇಶ್ವರ: ಶಿಲಾ ಶಾಸನಯುಕ್ತ ತಲೇಕಳ ಶ್ರೀಸದಾಶಿವ ರಾಮವಿಠಲ ಪುಣ್ಯ ಕ್ಷೇತ್ರದಲ್ಲಿ ಬುಧವಾರ ಪ್ರಾತ:ಕಾಲ ಉಷಃ ಪೂಜೆಯ ಬಳಿಕ ವೇ.ಮೂ. ಯನ್. ವಾಸುದೇವ ಭಟ್ ಸಂಕೇಸ ಇವರ ನೇತೃತ್ವದಲ್ಲಿ ವಿಶೇಷ ಸೇವೆಯಾಗಿ ಬೆಣ್ಣೆಮನೆ ಗೋಪಾಲಕೃಷ್ಣ ಭಟ್ ಇವರ ಸೇವಾರ್ಥ ಶ್ರೀ ಗಣಪತಿ ಹವನ, ಪಂಚಾಮೃತಾಭಿಷೇಕ, ಶತ ರುದ್ರಾಭಿಷೇಕ ಸರ್ವಾಲಂಕಾರದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ನವೀಕರಣ ಜೀರ್ಣೋದ್ಧಾರದ ಕಾಮಗಾರಿ ಸಲುವಾಗಿ ವಿಜ್ಞಾಪನಾ ಪತ್ರ ಬಿಡುಗಡೆಯನ್ನು ಶ್ರೀ ಸದಾಶಿವ ದೇವರ ಸಮ್ಮುಖದಲ್ಲಿ ಗಣ್ಯರ, ಊರ ಪರವೂರ, ಭಕ್ತ ಮಹಾಜನರೊಡಗೂಡಿ ಬಿಡುಗಡೆಗೊಳಿಸಲಾಯಿತು.