ಮಧೂರು: ಮೊಗೇರ ಸಮಾಜದ ಆಶ್ರಯದಲ್ಲಿ 2019ನೇ ಸಾಲಿನ ಕನ್ನಡ ದಿನದರ್ಶಿಕೆಯನ್ನು ಉಳಿಯತ್ತಡ್ಕದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಾಜದ ಅಧ್ಯಕ್ಷ ಆನಂದ ಮವ್ವಾರ್ ಅಧ್ಯಕ್ಷತೆಯಲ್ಲಿ ನಿವೃತ್ತ ಆರ್‍ಟಿಒ ಮಾಧವ ಮಂಗಳೂರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಮಾಜಸ ಮುಖಂಡರಾದ ರಾಮಪ್ಪ ಮಂಜೇಶ್ವರ, ಶಂಕರ ದರ್ಬೆತ್ತಡ್ಕ, ಗೋಪಾಲ ಡಿ., ವಸಂತ ಅಜಕೋಡು, ಕೃಷ್ಣ ದರ್ಬೆತ್ತಡ್ಕ, ನಿಟ್ಟೊನಿ ಬಂದ್ಯೋಡ್, ರಾಮ ಪಟ್ಟಾಜೆ, ಸುಧಾಕರ ಬೆಳ್ಳಿಗೆ, ಸುರೇಶ್ ಅಜಕೋಡು ಮೊದಲಾದವರು ಉಪಸ್ಥಿತರಿದ್ದರು.