ಬದಿಯಡ್ಕ : ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಸಮಿತಿಯ ಮಹಾಸಭೆಯು ಇತ್ತೀಚೆಗೆ ಧರ್ಬೆತ್ತಡ್ಕ ಶ್ರೀಧ್ಯಾನ ಮಂಟಪದಲ್ಲಿ ಜರಗಿತು. ಸಮಿತಿಯ ಅಧ್ಯಕ್ಷ ಆನಂದ ಕೆ. ಮವ್ವಾರ್‍ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2019ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಸಂತ ಅಜಕ್ಕೋಡು (ಅಧ್ಯಕ್ಷರು), ಸುಂದರಿ ಎಮ್. (ಉಪಾಧ್ಯಕ್ಷೆ), ಶಂಕರ ಧರ್ಬೆತ್ತಡ್ಕ (ಪ್ರಧಾನ ಕಾರ್ಯದರ್ಶಿ), ಸುಧಾಕರ ಬೆಳ್ಳಿಗೆ (ಕಾರ್ಯದರ್ಶಿ), ಕೃಷ್ಣದಾಸ್ ಧರ್ಬೆತ್ತಡ್ಕ (ಕೋಶಾಧಿಕಾರಿ) ಹಾಗೂ 16 ಮಂದಿ ಸದಸ್ಯರು. ಆನಂದ ಕೆ.ಮವ್ವಾರು (ಗೌರವಾಧ್ಯಕ್ಷರು), ರಾಮಪ್ಪ ಮಂಜೇಶ್ವರ, ಕೃಷ್ಣ ದರ್ಭೆತ್ತಡ್ಕ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶ್ಯಾಮ ಚೇನೆಕ್ಕೋಡು (ರಕ್ಷಾಧಿಕಾರಿಗಳು) ಹಾಗೂ ಸಂಚಾಲಕರಾಗಿ ರಾಮ ಪಟ್ಟಾಜೆ, ಸುಂದರ ಬಾರಡ್ಕ, ಸುಂದರ ಮಾಳಂಗೈ ಅವರನ್ನು ಆರಿಸಲಾಯಿತು.
ಮದರು ಮಹಾಮಾತೆಗೆ ಮಧೂರು ಕ್ಷೇತ್ರದ ಮೂಲಸ್ಥಾನದಲ್ಲಿ ಗುಡಿಕಟ್ಟಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಸ್ವರ್ಣಪ್ರಶ್ನೆ ಯಲ್ಲಿ ತಿಳಿದು ಬಂದಿದ್ದರೂ, ಸಂಬಂಧಪಟ್ಟವರು, ದೇವಸ್ವಂ ಬೋರ್ಡ್ ವಿಳಂಬ ಧೋರಣೆ ತಳೆಯುತ್ತಿದ್ದು, ಈ ನಿಲುವು ಪ್ರತಿಭಟನಾರ್ಹ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಸಂತ ಅಜಕ್ಕೋಡು ಹೇಳಿದ್ದಾರೆ. ಕ್ಷೇತ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭದಲ್ಲಿ ಮೂಲಸ್ಥಾನದಲ್ಲಿ ಮದರುವಿಗೆ ಗುಡಿ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನು ಶೀಘ್ರ ಪರಿಗಣಿಸಬೇಕೆಂದು ಅವರು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.