ಮುಳ್ಳೇರಿಯ: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ತಯಾರಿಸಿದ ಲಿಟಲ್ ಕೈಟ್ಸ್ ಇ-ಮೆಗಜಿನ್(ವಿಶೇಷಾಂಕ)ನ್ನು ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಬಿಡುಗಡೆಗೊಳಿಸಿದರು.
ಲಿಟ್ಲ್ ಕೈಟ್ಸ್ ವಿದ್ಯಾರ್ಥಿಗಳಾದ ಅಭಿಲಾಷ್, ಅಕ್ಷತಾ, ವರ್ಷಾ, ಸೌಂದರ್ಯ, ವೈಷ್ಣವಿ.ಜೆ ಪ್ರಜ್ಞಾ ತಮ್ಮ ಅನಿಸಿಕೆ ತಿಳಿಸಿದರು.ಶಾಲಾ ಕೈಟ್ ಮಾಸ್ಟರ್ ರಾಘವ ಹಾಗೂ ಕೈಟ್ ಮಿಸ್ಟ್ರಸ್ ಶೋಭಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಯಂ.ಆರ್. ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಅಧ್ಯಾಪಕ ಕುಂಞÂರಾಮ ಮಣಿಯಾಣಿ, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.