ಉಪ್ಪಳ: ಕುಲಾಲ ಸುಧಾರಕ ಸಂಘ ಪೈವಳಿಕೆ ಶಾಖೆಯ ಅನ್ನದಾನ ಛತ್ರದ ಕೆಲಸಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2,00,000 ರೂ.ಅನುದಾನದ ಡಿ.ಡಿ.ಯನ್ನು ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಅವರು ಸಂಘದ ಪದಾಧಿಕಾರಿಗಳಿಗೆ ಇತ್ತೀಚೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ವಿಶ್ವನಾಥ ಗೌಡ, ಸೇವಾ ಪ್ರತಿನಿಧಿ ಶಿವರಾಮ ಶೆಟ್ಟಿ ಬಾಯಾರು, ಒಕ್ಕೂಟದ ಅಧ್ಯಕ್ಷೆ ಬೇಬಿ, ಲೀನಾ ಸೆರಾವೋ, ಮನೋಹರ ವಾದ್ಯಪಡ್ಪು, ಸಂಘದ ಅದ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ಸದಸ್ಯರುಗಳಾದ ನಾಗೇಶ್ ಕೋಡಂದೂರು, ಶ್ರೀಧರ, ರಾಮ ಮೂಲ್ಯ, ಶೀನ ಮಾಸ್ತರ್ ಕೋರಿಕ್ಕಾರು, ಪುಷ್ಪಾ ದಳಿಕುಕ್ಕು, ಪರಮೇಶ್ವರ ಪಾವಳಕೋಡಿ, ಚಿದಾನಂದ ಲಾಲ್‍ಬಾಗ್, ಜಯಂತ ಚಿಪ್ಪಾರು, ಸುಬ್ರಾಯ ಸಾಯ ಮೊದಲಾದವರು ಉಪಸ್ಥಿತರಿದ್ದರು.