ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ಜಾತ್ರೆಯ ಭಾಗವಾಗಿ ಭಾನುವಾರ ಬೆಳಿಗ್ಗೆ ಸ್ವಚ್ಚ್ ಕಣಿಪುರ ಎಂಬ ಧ್ಯೇಯವನ್ನು ಮುಂದಿಟ್ಟು ಯುವಕರ ತಂಡದಿಂದ ಕುಂಬ್ಳೆ ಪೇಟೆಯಲ್ಲಿ ಸ್ವಚ್ಚತಾ ಚಟುವಟಿಕೆಗೆ ನಡೆಯಿತು.
ದೇವಸ್ಥಾನದ ಪರಿಸರದಿಂದ ಪ್ರಾರಂಭವಾಗಿ, ದೇವಸ್ಥಾನ ರಸ್ತೆ, ಪೊಲೀಸ್ ಠಾಣಾ ರಸ್ತೆ, ಕುಂಬ್ಳೆ ಪೇಟೆ, ಬದಿಯಡ್ಕ ರಸ್ತೆ, ಗ್ರಾಮ ಪಂಚಾಯತ್ ಕಾರ್ಯಾಲಯ ಪರಿಸರ ಹಾಗು ಇನ್ನಿತರ ಕಡೆ ಶುಚೀಕರಣ ನಡೆಸಲಾಯಿತು. ಶುಚೀಕರಣ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಹಾಗು ಮಹಿಳೆಯರು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಕುಂಬ್ಳೆ ಪ್ರಾಥಮಿಕ ಅರೋಗ್ಯ ಕೇಂದ್ರದ ಅಧಿಕಾರಿಗಳು ಕೈ ಜೋಡಿಸಿದ್ದರು. ಬಳಿಕ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶುಚೀಕರಣ ಸೇವೆ ನಾಗರಿಕರ ಪ್ರಶಂಸೆಗೆ ಕಾರಣವಾಯಿತು.