ಕಾಸರಗೋಡು: ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿಯಾಗಿ ಎಂ.ಮಧುಸೂದನನ್ ಪದಗ್ರಹಣ ಮಾಡಿದ್ದಾರೆ.
ಜಿಲ್ಲೆಯ ನಿವಾಸಿಯಾಗಿರುವ ಇವರು ಕಿನಾನೂರು-ಕರಿಂದಳಂ ಗ್ರಾಮಪಂಚಾಯತಿ ಮೀರ್ಕಾನಂ ನಿವಾಸಿಯಾಗಿದ್ದಾರೆ. ಜಿಲ್ಲೆಯವರೇ ಆಗಿ ಜಿಲ್ಲಾ ಮಾಹಿತಿ ಅಧಿಕಾರಿಯ ಹುದ್ದೆಗೇರಿದ ಪ್ರಥಮ ವ್ಯಕ್ತಿ ಇವರು ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಕೋಯಿಕೋಡ್ ಜಿಲ್ಲಾ ಮಾಹಿತಿ ಅಧಿಕಾರಿ, ಕೊಚ್ಚಿಮೀಡಿಯಾ ಅಕಾಡೆಮಿ ಸಹಾಯಕ ಕಾರ್ಯದರ್ಶಿ ಎಂಬಪದವಿಗಳಲ್ಲಿ ಈಗಾಗಲೇ ಅವರು ಸೇವೆ ಸಲ್ಲಿಸಿದ್ದಾರೆ. ನಿಫ ವೈರಸ್ ಬಾಧೆ ಪ್ರತಿರೋಧ ಕುರಿತು ಮಧ್ಯಮ ಮ್ಯಾನೇಜ್ ಮೆಂಟ್ ಮತ್ತು ಜನಜಾಗೃತಿ ನಡೆಸುವ ಚಟುವಟಿಕೆಗಳಿಗೆ ನೇತರತ್ವ ವಹಿಸಿದ ಅವರು ರಾಜ್ಯ ಸರಕಾರದ ವಿಶೇಷ ಪುರಸ್ಕಾರಕ್ಕೆ ಭಾಜನರಾದವರು.
ಮಾಹಿತಿ ಇಲಾಖೆಯಲ್ಲಿ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಸಹಾಯಕ ಸಂಪಾದಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. 11 ವರ್ಷಗಳ ಮಾಧ್ಯಮ ಕ್ಷೇತ್ರದ ಅನುಭವ ಹೊಂದಿದ ಇವರು ಕಾ?ಂಗಾಡ್ ನಿಂದ ಪ್ರಕಟಗೊಳ್ಳುವ ಸಂಜೆ ಪತ್ರಿಕೆಯೊಂದರಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು.