ಉಪ್ಪಳ: ಜಿಲ್ಲೆಯಲ್ಲೇ ಅತ್ಯಂತ ಹಳೆಯದಾದ ರೈಲು ನಿಲ್ದಾಣಗಳಲ್ಲಿ ಒಂದಾದ ಉಪ್ಪಳ ರೈಲು ನಿಲ್ದಾಣದ ಪ್ರಾಥಮಿಕ ಅಗತ್ಯಗಳ ನಿರ್ವಹಣೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳು ತೋರುತ್ತಿರುವ ಒಟ್ಟು ವ್ಯವಸ್ಥೆಯ ಅವಗಣನೆಯ ವಿರುದ್ದ ಸರ್ವಪಕ್ಷ ಸಹಯೋಗದೊಂದಿಗೆ ಮಂಗಳವಾರ ಸಂಜೆ ರೈಲು ನಿಲ್ದಾಣ ಪರಿಸರದಲ್ಲಿ ಮಾನವ ಹಕ್ಕು ಸಂರಕ್ಷಣಾ ಮಿಶನ್ ನೇತೃತ್ವದಲ್ಲಿ ಸಂಜೆ ಧರಣಿ ನಡೆಯಿತು.
ಧರಣಿಯನ್ನು ಮಾನವ ಹಕ್ಕು ಸಂರಕ್ಷಣಾಮಿಶನ್ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಮೊಹಮ್ಮದ್ ಕುಂಞÂ ಉದ್ಘಾಟಿಸಿದರು. ಸಂಘಟನೆಯ ಮಂಗಲ್ಪಾಡಿ ಪಂಚಾಯತು ಘಟಕ ಅಧ್ಯಕ್ಷ ರಾಘವ ಚೇರಾಲು ಅಧ್ಯಕ್ಷತೆ ವಹಿಸಿದ್ದರು.ಉಪ್ಪಳ ರೈಲು ನಿಲ್ದಾಣ ಉಳಿಸಿ ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಮೊಹಮ್ಮದ್ ಅಝೀಂ ಮಣಿಮುಂಡ, ಮೊಹಮ್ಮದ್ ಕೈಕಂಬ, ಎಂ.ಕೆ.ಅಲಿ ಮಾಸ್ತರ್, ನಾಫಿ ಬಪ್ಪಾಯಿತೊಟ್ಟಿ, ಬಿ.ಎಂ.ಮುಸ್ತಫ, ರಹ್ಮಾನ್ ಗೋಲ್ಡನ್, ಅಮೀರ್ ಮಾಸ್ತರ್, ನ್ಯಾಯವಾದಿ ಕರೀಂ ಪೂನಾ, ಅಬು ತಮಾಂ, ಬಾಲಮಣಿ ಟೀಚರ್, ಜಲೀಲ್ ಶಿರಿಯ, ಝೀನತ್ ಝಕಾರಿಯಾ, ಗುರುಸ್ವಾಮಿ, ಮನ್ಸೂರ್ ಮಲ್ಲತ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕೆ.ಐ.ಇಕ್ಬಾಲ್ ಸ್ವಾಗತಿಸಿ, ಹಮೀದ್ ವಂದಿಸಿದರು.
ಬುಧವಾರದಿಂದ ಉಪ್ಪಳ ಪೇಟೆಯಲ್ಲಿ ರಿಲೇ ಕ್ರಮದಲ್ಲಿ ಸತ್ಯಾಗ್ರಹ ಆರಂಭವಾಯಿತು.