ಕಾಸರಗೋಡು: ಹರಿತ ಕೇರಳಂ ಮಿಷನ್ ನ ವಾಹನ ಪ್ರಚಾರ ಜಾಥಾ "ಹರಿತಯಾನಂ-2019" ಇಂದು (ಜ.4) ಆರಂಭಗೊಳ್ಳಲಿದೆ.
ಹರಿತ ಕೇರಳಂ ಮಿಷನ್ ನ ಚಟುವಟಿಕೆಗಳ, ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ದೃಷ್ಟಿಯಿಂದ (ಉತ್ತರ ಮತ್ತು ದಕ್ಷಿಣ-ಎರಡು ವಾಹನ ಪರ್ಯಟನೆಗಳು)ಕಾಸರಗೋಡು ಮತ್ತು ತಿರುವನಂತಪುರಂ ಜಿಲ್ಲೆಗಳಿಂದ ಪರ್ಯಟನೆ ಆರಂಭಿಸಲಿವೆ. ಕಾಸರಗೋಡು ಜಿಲ್ಲೆಯ ವಾಹನ ಪರ್ಯಟನೆ ಬೆಳಿಗ್ಗೆ 10 ಗಂಟೆಗೆ ಹೊಸಬಸ್ ನಿಲ್ದಾಣ ಬಳಿಯ ಸಹಿಮರ ಬಳಿ ಆರಂಭಗೊಳ್ಳಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ವಾಹನ ಜಾಥಾಕ್ಕೆ ಹಸುರು ನಿಶಾನೆ ತೋರಿಸಿ ಚಾಲನೆ ನೀಡುವರು. ತಿರುವನಂತಪುರಂ ಜಿಲ್ಲೆಯ ವಾಹನ ಜಾಥಾ ಬೆಳಿಗ್ಗೆ 9.30ಕ್ಕೆ ಕರಿಕುಳಂ ಪಂಚಾಯತ್ ಕಚೇರಿ ಜಂಕ್ಷಬ್ ಬಳಿ ಆರಂಭಗೊಳ್ಳಲಿದೆ.