ಕಾಸರಗೋಡು: ರಾಜ್ಯ ಇಲೆಕ್ಟ್ರಿಕಲ್ ಇನ್ಸ್ಪ್ಪೆಕ್ಟರೇಟ್ ವ್ಯಾಪ್ತಿಯ ಕಾಸರಗೋಡು ಜಿಲ್ಲಾ„ಕಾರಿ ಕಚೇರಿಯಲ್ಲಿರುವ ಜಿಲ್ಲಾ ಮೀಟರ್ ಟೆಸ್ಟಿಂಗ್ ಆ್ಯಂಡ್ ಸ್ಟಾಂಡಡ್ರ್ಸ್ ಲೆಬೋರೆಟರಿಗೆ ಕೇಂದ್ರ ಸರಕಾರದ ಸಯನ್ಸ್ ಆಂಡ್ ಟೆಕ್ನಾಲಜಿ ಇಲಾಖೆ ವ್ಯಾಪ್ತಿಯ ನ್ಯಾಷನಲ್ ಅಕ್ರಡಿಷನ್ ಲೆಬೋರೇಟರೀಸ್(ಎನ್.ಎ.ಬಿ.ಎಲ್) ರಾಷ್ಟ್ರೀಯ ಮಟ್ಟದ ಅಂಗೀಕಾರ ಲಭಿಸಿದೆ.
ಪ್ರಯೋಗಾಲಯದ ವಿದ್ಯುತ್ ಬಳಕೆ ಗಣನೆ ಮಾಡುವ ಎನರ್ಜಿ ಮೀಟರ್ ಕಾಲಿಬರೇಷನ್ ವಿಭಾಗ ಈ ಅಂಗೀಕಾರಕ್ಕೆ ಅರ್ಹವಾಗಿದೆ. ಈ ಮೂಲಕ ಗ್ರಾಹಕರು ನಂಬುಗೆಯೊಂದಿಗೆ ಮನೆಗಳಲ್ಲಿ, ಇತರ ಸಂಸ್ಥೆಗಳಲ್ಲಿ ಎನರ್ಜಿ ಮೀಟರ್ ಕಾಲಿಬರೇಟ್ ನಡೆಸಬಹುದಾಗಿದೆ. ದಿಲ್ಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಎನ್.ಎ.ಬಿ.ಎಲ್. ಮಂಡಳಿ ಪ್ರತಿನಿದಿಗಳು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಪ್ರಯೋಗಾಲಯಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದರು. ಈಗ ಎನರ್ಜಿ ಮೀಟರ್ ಕಾಲಿಬರೇಶನ್ ಅಲ್ಲದೆ ಇಲೆಕ್ಟ್ರಿಕಲ್ ಉಪಕರಣಗಳಾದ ಇ.ಎಲ್.ಸಿ.ಬಿ., ಸಿ.ಎ., ಇಂಡಕ್ಷನ್ ಟೆಸ್ಟರ್ ಇತ್ಯಾದಿಗಳೂ ಈ ಪ್ರಯೋಗಾಲಯದಲ್ಲಿ ಚಟುವಟಿಕೆ ನಡೆಸುತ್ತಿವೆ.
ಚಿತ್ರ ಮಾಹಿತಿ : ಕಾಸರಗೋಡು ಜಿಲ್ಲಾ„ಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಇಲೆಕ್ಟ್ರಿಕಲ್ ಕಚೇರಿಯ ಮೀಟರ್ ಟೆಸ್ಟಿಂಗ್ ಲ್ಯಾಬ್