ಮುಳ್ಳೇರಿಯ: ಇರಿಯಣ್ಣಿ ಹಯ್ಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಸ್ವಯಂಸೇವಕರು ಬಡ್ಸ್ ಶಾಲೆಯ ಮಕ್ಕಳಿಗೆ ಪಾಥೇಯಂ-2019 ಹುತ್ತರಿ ಔತಣ ನೀಡಿದರು.
ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಬಂಜರು ಭೂಮಿಯಲ್ಲಿ ಬೆಳೆಸಿದ ಭತ್ತದ ಕೃಷಿಯ ಅಕ್ಕಿಯನ್ನು ಉಪಯೋಗಿಸಿ ಹೊಸ ಅಕ್ಕಿ ಊಟವನ್ನು ತಯಾರಿಸಲಾಗಿತ್ತು. ಜೈವಿಕ ಗೊಬ್ಬರ ಮಾತ್ರ ಬಳಸಿ ಬೆಳೆಸಲಾದ ವಸ್ತುಗಳನ್ನು ಉಪಯೋಗಿಸಿ ತಯಾರಿಸಲಾಗಿತ್ತು.
ಕಾಸರಗೋಡು ಸಹ ಜಿಲ್ಲಾಧಿಕಾರಿ ಅರುಣ್.ಕೆ.ವಿಜಯನ್ ಉದ್ಘಾಟಿಸಿದರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಎಎಸ್‍ಪಿ ಟ್ರೈನಿ ಸ್ವಪ್ನಿಲ್ ಮಹಾಜನ್, ಐಪಿಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗೀತಾ ಗೋಪಾಲನ್, ಪಿ.ವಿ.ಶಶಿ, ಕೆ.ಪ್ರಭಾಕರನ್, ಅನೀಸ ಮನ್ಸೂರ್, ಜೋನ್ ಮಾಸ್ಟರ್, ಚಂದ್ರನ್ ಮುರಿಕೋಳಿ, ಚೆರಿಯೋನ್.ಪಿ, ಉಷಾ.ಪಿ, ಶಾಹುಲ್ ಹಮೀದ್, ಮಿನಿ.ಪಿ.ವಿ, ಸಿ.ಪಿ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ಅನಂತರ ಎನ್‍ಎಸ್‍ಎಸ್ ಸ್ವಯಂ ಸೇವಕರು ಮತ್ತು ಬಡ್ಸ್ ವಿದ್ಯಾರ್ಥಿಗಳು ಸೇರಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.