ಬದಿಯಡ್ಕ: ಪೆರಡಾಲ ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ಹಾಗು ಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ದಿನ ಮಹೋತ್ಸವ ಮತ್ತು ದೈವಗಳ ನೇಮೋತ್ಸವದ ಅಂಗವಾಗಿ ಜ.21 ರಂದು ಬೆಳಿಗ್ಗೆ ಮಾಡದ ಮಹಾದ್ವಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಜ.21 ರಂದು ಗಣಪತಿ ಹೋಮ, ಉಗ್ರಾಣ ಮುಹೂರ್ತ, ಶ್ರೀ ದೈವಗಳಿಗೆ ಮಹಾ ತಂಬಿಲ, ಅನ್ನದಾನ, ಭಜನೆ, ಶ್ರೀ ದುರ್ಗಾ ಪೂಜೆ, ಶ್ರೀ ಪೂಮಾಣಿ ಕಿನ್ನಿಮಾಣಿ, ಬಬ್ಬರ್ಯ ಹಾಗು ಬೀರ್ಣಾಳ್ವ ದೈವಗಳ ಭಂಡಾರ ಇಳಿಯುವುದು, ಪ್ರಸಾದ ಭೋಜನ, ನೃತ್ಯ ವೈಭವ ಕಾರ್ಯಕ್ರಮ ಜರಗಿತು. ಜ.23 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರಗಲಿದೆ.