ಬದಿಯಡ್ಕ: ಉಪ್ಪಂಗಳ ಟ್ರಸ್ಟ್- ಕ್ರಿಯೆಟಿವ್ ಕಾಲೇಜು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಾರಂಪಾಡಿ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ರೆಡ್ ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಬದಿಯಡ್ಕ ಕ್ರಿಯೆಟಿವ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ಉಪ್ಪಂಗಳ ಟ್ರಸ್ಟ್‍ನ ಟ್ರಸ್ಟಿ ಉದ್ಯಮಿ ನಿತ್ಯಾನಂದ ಶೆಣೈ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನಾರಂಪಾಡಿ ಘಟಕದ ಅಧ್ಯಕ್ಷ ದಿವಾಕರ ನಾರಂಪಾಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಕೆ ಎಸ್ ಎನ್ ಪ್ರಸಾದ್ ಹಾಗೂ ಪ್ರಾಂಶುಪಾಲ ಶಿವದಾಸ್ ಸಿಎಚ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಇನ್ನೋರ್ವ ಅತಿಥಿ ಮಂಗಳೂರಿನ ಖ್ಯಾತ ವೈದ್ಯ ಡಾ| ಜೆ. ಎನ್. ಭಟ್ ಮಾತನಾಡಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯವು ಉತ್ತಮವಾಗುತ್ತದೆ. ಇದೊಂದು ಸಾಮಾಜಿಕ ಚಿಂತನೆಯ ವಿಚಾರವೂ ಆಗಿದೆ ಎಂದರು. ಮಂಗಳೂರು ರೆಡ್ ಕ್ರಾಸ್ ಪ್ರಬಂಧಕ ಎಡ್ವರ್ಡ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪನ್ನು ಅರಿತಿರಬೇಕು. ತುರ್ತು ಸಂದರ್ಭಗಳಲ್ಲಿ ಇದು ನಮಗೆ ನೆರವಾಗುತ್ತದೆ. ರಕ್ತದಾನ ಶಿಬಿರಗಳಿಂದ ಅಪರೂಪದ ರಕ್ತದ ಗುಂಪುಗಳು ಲಭ್ಯವಾಗುತ್ತವೆ ಎಂದರು. ಮೈತ್ರಿ ಕಾಸರಗೋಡಿನ ಪ್ರಕಾಶ್ ನಾಯಕ್, ಉಪ್ಪಂಗಳ ಟ್ರಸ್ಟನ ಬಾಲಗೋಪಾಲ ಶರ್ಮ, ಶ್ರೀಹರಿ ಭಟ್ ಸಜಂಗದ್ದೆ, ಕಾಲೇಜಿನ ಅಧ್ಯಾಪಕ ವೃಂದ ಬಿ.ರವಿರಾಜ್, ಸುನಿಲ್, ಭಾಸ್ಕರ, ಪ್ರಕಾಶ್, ರವಿರಾಜ್ ಎಂ., ಶ್ಯಾಮ್‍ಲಾಲ್ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮ ಉಪ್ಪಂಗಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೋಪಾಲಕೃಷ್ಣ ಸಿ.ಎಚ್.ವಂದಿಸಿದರು. ಮಧುಶ್ರೀ ಪ್ರಾರ್ಥಿಸಿದರು. ಕಾಲೇಜಿನ ಸಿಬ್ಬಂದಿ ವರ್ಗಸಹಕರಿಸಿದರು. ಒಟ್ಟು 80 ಮಂದಿ ರಕ್ತದಾನ ಮಾಡಿದರು.