ಮಂಜೇಶ್ವರ: ಕುಂಜತೂರು, ಮೊರತ್ತಣೆ, ಬಾಯರು ಪದವು, ತಲಪಾಡಿ, ಉಪ್ಪಳ, ನಯಾಬಝಾರ್, ಕುಂಬಳೆಗಳಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಾಗೂ ಭಕ್ತರ ವಾಹನಗಳ ಮೇಲೆ ಕಲ್ಲು ತೂರಟ ನಡೆಸಿದ ಒಬ್ಬನೇ ಒಬ್ಬ ಅಕ್ರಮಿ, ಕಿಡಿಗೇಡಿಗಳನ್ನು ಬಂಧಿಸದ ಪೊಲೀಸರ ತಾರತಮ್ಯ ನೀತಿ ಖಂಡನೀಯವೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಮಧ್ಯರಾತ್ರಿಯಲ್ಲಿ ಬಂಧಿಸುವ ಪೊಲೀಸ್, ಹಿಂದುಗಳ ಮೇಲೆ ಅಕ್ರಮಿಸಿದ ಅಯ್ಯಪ ಮಾಲಾಧಾರಿಗಳಿಗೆ ಹಲ್ಲೆ ಮಾಡಿದವರನ್ನು ಬಂಧಿಸದೆ ಎಡರಂಗದ ಆದೇಶದಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ. ಮೊರತ್ತಣೆಯಲ್ಲಿ ಬೆಳಿಗ್ಗೆ 5.30ಕ್ಕೆ ವಾಕಿಂಗ್ ಹೋದ ಹಿಂದೂ ನಾಗರಿಕನೋರ್ವನನ್ನು ತಲವಾರು ಹಲ್ಲೆ ನಡೆಸಿದ ಮುಸ್ಲಿಂ ಮೂಲಭೂತವಾದಿಗಳನ್ನು ಬಂಧಿಸದ ಪೊಲೀಸ್, ಬೆಳಿಗ್ಗೆ 6.30 ರ ಹೊತ್ತಿಗೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯ ಮೇಲೆ ಮಧ್ಯಾಹ್ನ ನಡೆದ ಲಾಠಿಚಾರ್ಜ್ ವಿಚಾರದಲ್ಲಿ ಆರೋಪಿಯಾಗಿ ಮಾಡಿರುವುದು ಪೊಲೀಸರ ಕಪಟತನವನ್ನು ಸ್ಪಷ್ಟ ಪಡಿಸುತ್ತಿದೆ ಎಂದು ಬಿಜೆಪಿ ದೂರಿದೆ.
ಮತೀಯ ಗಲಭೆ ನಡೆಸಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಿಂದೂಗಳ ಮೇಲೆ ಹಲ್ಲೆಗೆ ಪ್ರೇರೇಪಣೆ ನೀಡಿರುವುದು ಪೂರ್ವನಿಯೋಜಿತ ಕೃತ್ಯವನ್ನು ಪೊಲೀಸ್ ಬಯಲುಗೊಳಿಸಬೇಕು, ಕಡಂಬಾರು ದೇವಸ್ಥಾನದದಲ್ಲಿದ್ದ ಇಬ್ಬರು ಯುವಕರಿಗೆ ತಲವಾರು ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಇದಲ್ಲದಿದ್ದರೆ ಬಿಜೆಪಿ ಪ್ರತಿಭಟ£ ನಡೆಸಲು ನಿರ್ಣಯ ಅಂಗೀಕರಿಸಿದೆ. ಕುಂಜತೂರು, ಮಂಜೇಶ್ವರ ಕಡಪ್ಪರ, ಹೊಸಂಗಡಿ ಕೇಂದ್ರಿಕರಿಸಿ ಕಾರ್ಯನಿರ್ವಹಿಸುವ ಮುಸ್ಲಿಂ ಗೂ0ಡ ತಂಡದ ವಿರುದ್ದ ಪೊಲೀಸ್ ಇಲಾಖೆ ಮೌನವಾಗಿದೆ.ಇದು ಯಾರ ಒತ್ತಡದಿಂದ ಎಂದು ಬಿಜೆಪಿ ಪ್ರಶ್ನಿಸಿದೆ?
ಆಯ್ಯಪ್ಪ ಭಕ್ತರ ಮೇಲಿನ ದಾಳಿಕೊರರನ್ನು ಬಂಧಿಸದಿದ್ದರೆ ಪೊಲೀಸರ ಹಾಗೂ ಸರಕಾರದ ತಾರತಮ್ಯ ನೀತಿಯನ್ನು ಜನತೆಯ ಮುಂದಿಡಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ.