ಕಾಸರಗೋಡು: ತ್ಯಾಜ್ಯ ಮೂಲಕ ಸಂಗ್ರಹಿಸಲಾದ ಪ್ಲಾಸ್ಟಿಕ್ ಪುಡಿ ಗಟ್ಟಿ ರಸ್ತೆ ನಿರ್ಮಾಣಕ್ಕೆ ಬಳಸುವ ಮೂಲಕ ನೀಲೇಶ್ವರ ನಗರಸಭೆ ನಾಡಿಗೆ ಹೊಸದಿಶೆ ತೋರುತ್ತಿದೆ.
ಯೋಜನೆಯ ಅಂಗವಾಗಿ ತ್ಯಾಜ್ಯ ಸಂಗ್ರಹ ನಡೆಸಿ ಪಡೆದ 11 ಕ್ವಿಂಟಾಲ್ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪುಡಿ ಮಾಡಿ ಕ್ಲಿನ್ ಕೇರಳ ಕಂಪೆನಿಗೆ ನಗರಸಭೆ ಹಸ್ತಾಂತರಿಸಿದೆ. ನಗರಸಭೆ ವ್ಯಾಪ್ತಿಯ 32 ವಾರ್ಡ್‍ಗಳಲ್ಲಿರುವ ಮನೆಗಳಿಂದ, ವ್ಯಾಪಾರ ಸಂಸ್ಥೆಗಳಿಂದ ಹಸುರು ಕ್ರಿಯಾ ಸೇನಾ ಸದಸ್ಯರು ತ್ಯಾಜ್ಯ ಸಂಗ್ರಹಿಸಿ, ಆ ಮೂಲಕ ಪಡೆದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಶುಚೀಕರಿಸಿ ಶ್ರೆಡ್ಡಿಂಗ್ ಘಟಕಗಳಲ್ಲಿ ಪುಡಿ ಮಾಡಿಸಿದ್ದಾರೆ. ಈ ಪುಡಿಯನ್ನು ಈಗ ಕ್ಲಿನ್ ಕಂಪೆನಿಗೆ ಹಸ್ತಾಂತರಿಸಲಾಗಿದೆ. ಈ ಪುಡಿಯನ್ನು ವಿವಿಧ ಸ್ಥಳೀಯಾಡಳಿತೆ ಸಂಸ್ಥೆಗಳ ವ್ಯಾಪ್ತಿಯ ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ಕಾಯಕವಿಲ್ಲದೆ ಮುಚ್ಚುಗಡೆಯಲ್ಲಿದ್ದ ಇಲ್ಲಿನ ಚಿರಪ್ಪುರಂನ ತ್ಯಾಜ್ಯ ಪರಿಷ್ಕರಣೆ ಕೇಂದ್ರ ಈ ಮೂಲಕ ತೆರೆಯಬೇಕಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳ 2 ರಂದು ಈ ಕೇಂದ್ರ ಮತ್ತೆ ಚಟುವಟಿಕೆ ಆರಂಭಿಸಿದೆ. ಇಲ್ಲಿರುವ ಆಧುನಿಕ ಯಂತ್ರೋಪಕರಣಗಳ ಮೂಲಕ ಪ್ಲಾಸ್ಟಿಕ್ ಪುಡಿ ಮಾಡಿ ಅದನ್ನು ರವಾನಿಸಲಾಗಿದೆ.