ಕಾಸರಗೋಡು: ಕೇರಳ ಸರಕಾರದಿಂದ ಕನ್ನಡ ಭಾಷೆ, ಸಂಸ್ಕøತಿಗೆ ಗದಾಪ್ರಹಾರ ಬೀಳುತ್ತಿರುವ ಈ ಸಂದರ್ಭದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಿಕೊಳ್ಳಲು ಕನ್ನಡ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ ಎಂದು ಉದ್ಯಮಿ ರಾಂ ಪ್ರಸಾದ್ ಅವರು ಹೇಳಿದರು.
ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಸೋಮವಾರ ನಡೆದ ಕನ್ನಡ ಮಾಧ್ಯಮ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನಲ್ಲಿ ಕನ್ನಡ ಪತ್ರಕರ್ತರು ಒಗ್ಗಟ್ಟಿನಿಂದ ಭಾಷೆ, ಸಂಸ್ಕøತಿಯನ್ನು ಉಳಿಸಲು ಸಕ್ರಿಯರಾಗಬೇಕು. ಈಗಾಗಲೇ ಸಾಕಷ್ಟು ಕೊಡುಗೆ ನೀಡಿರುವ ಕನ್ನಡ ಪತ್ರಕರ್ತರಿಂದ ಇನ್ನಷ್ಟು ಸೇವೆ ಅಗತ್ಯವಿದೆ. ಕನ್ನಡದ ಎಲ್ಲಾ ಪತ್ರಕರ್ತರು ಜೊತೆಯಾಗಿ ಕನ್ನಡಿಗರಿಗೆ ಸಮಸ್ಯೆ ಎದುರಾದಾಗ ಹೋರಾಟ ಅಕ್ಷರ ಕ್ರಾಂತಿಯ ಮೂಲಕ ಬಲ ನೀಡಬೇಕಿದೆ. ಜೊತೆಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಯುತ್ತ ಚೇವಾರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಹಿರಿಯ ಪತ್ರಕರ್ತ ಟಿ.ಶಂಕರನಾರಾಯಣ ಭಟ್ ತಮ್ಮ ಅನಿಸಿಕೆಗಳನ್ನು ಹೇಳಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವರದಿ ಮಂಡಿಸಿದರು.
ಪತ್ರಕರ್ತರಾದ ಪುರುಷೋತ್ತಮ ಪೆರ್ಲ, ಪ್ರದೀಪ್ ಕುಮಾರ್ ಬೇಕಲ್, ಸಾಯಿಭದ್ರಾ ರೈ, ಪುರುಷೋತ್ತಮ ನಾಯಕ್, ಸ್ಟೀಫನ್ ಕ್ರಾಸ್ತಾ, ದೇವದಾಸ್ ಪಾರೆಕಟ್ಟೆ, ಅಜಿತ್ ಸ್ವರ್ಗ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಪುರುಷೋತ್ತಮ ಭಟ್ ಸ್ವಾಗತಿಸಿ, ಶ್ರೀಕಾಂತ್ ಕಾಸರಗೋಡು ವಂದಿಸಿದರು. ಸಭೆಯಲ್ಲಿ ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಜಿಲ್ಲಾ ವಾರ್ತಾಧಿಕಾರಿಗಳ ಕಾರ್ಯಾಲಯದಲ್ಲಿ ಸುಧೀರ್ಘ ಕಾಲದ ಬೇಡಿಕೆಯಂತೆ ಕನ್ನಡ ವಾರ್ತಾ ಭಾಷಾಂತರಕಾರರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯಮಿಸಿರುವ ಬಗ್ಗೆ ಸಭೆಯಲ್ಲಿ ಅಭಿನಂದಿಸಲಾಯಿತು. ವಾರ್ತಾ ಭಾಷಾಂತರಕಾರರ ಹುದ್ದೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಲಾಯಿತು.
2019-20 ನೇ ಸಾಲಿಗೆ ಪ್ರಸ್ತುತ ವರ್ಷದ ಪದಾಧಿಕಾರಿಗಳನ್ನೇ ಮುಂದುವರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.