ಮಂಜೇಶ್ವರ: ಕಂಡಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸ್ಪೂರ್ತಿ ಕಡಂಬಾರು ಹಾಗೂ ಯಶಸ್ವಿ ಹೆಲ್ತ್ ಕೇರ್ ಹೊಸಂಗಡಿ ಇವುಗಳ ಆಶ್ರಯದಲ್ಲಿ ವೈದ್ಯಕೀಯ ಶಿಬಿರವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಸುಂದರಿ ಆರ್.ಶೆಟ್ಟಿ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಕುಸುಮಾ ಮೋಹನ ಶೆಟ್ಟಿ , ಶಂಕರನಾರಾಯಣ ಭಟ್, ಪವಿತ್ರಪಾಣಿ ಸುಬ್ರಹ್ಮಣ್ಯ ಅನಲತ್ತಾಯ, ಸೇವಾ ಸ್ಪೂರ್ತಿ ಸಂಘದ ಅಧ್ಯಕ್ಷ ಭಾಸ್ಕರ ಟೈಲರ್ ಕಡಂಬಾರು ಉಪಸ್ಥಿತರಿದ್ದರು. ಎಸ್.ಎನ್.ಕಡಂಬಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿದಾನಂದ ಕೋಡಿಜಾಲು ಸ್ವಾಗತಿಸಿ, ಯೋಗೀಶ್ ಶೆಟ್ಟಿ ವಂದಿಸಿದರು. ವೈಶಾಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೈದ್ಯಕೀಯ ಶಿಬಿರ ಜರಗಿತು. ಡಾ.ಸುಪ್ರಿಯಾ ಪಿ.ಎಸ್., ಡಾ.ಗಣರಾಜ ಕುಳಮರ್ವ, ಡಾ.ಅಶ್ವಿನಿ, ಡಾ.ಸಂದೀಪ್ ಕೆ.ಆರ್. ಸಹಕರಿಸಿದರು.