ಪೆರ್ಲ: ಮುಳ್ಳೇರಿಯ ಹವ್ಯಕ ಮಂಡಲದ ಎಣ್ಮಕಜೆ ವಲಯೋತ್ಸವವು ಭಾನುವಾರ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಗೋಪೂಜೆ, ಧನ್ವಂತರಿ ಹವನ ಹಾಗೂ ಶ್ರೀ ಗೋಪಾಲಕೃಷ್ಣ ಸಹಿತ ಶ್ರೀ ಧನ್ವಂತರಿ ಪೂಜೆ ನಡೆಯಿತು. ಮಹಾಮಂಡಲ ಧರ್ಮಕರ್ಮ ವಿಭಾಗ ಮತ್ತು ವಲಯ ವೈದಿಕ ವಿಭಾಗ ಪ್ರಮುಖರಾದ ವೇ.ಮೂ. ಕೇಶವಪ್ರಸಾದ ಭಟ್ ಕೂಟೇಲು ವೈದಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಭಜನಾ ರಾಮಾಯಣ, ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.
ಅಪರಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಸತೀಶ್ ಶಂಕರ ಭರಣ್ಯ ಮಧುಮೇಹದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪುರಸ್ಕøತರಾದ ಎಸ್.ಬಿ.ಖಂಡಿಗೆ, ವೇ.ಮೂ. ಕೇಶವಪ್ರಸಾದ ಭಟ್ ಕೂಟೇಲು, ಜಯರಾಮ ಗೋಪಾಲ ಸರ್ಪಮಲೆ, ಶಿವಪ್ರಸಾದ ವರ್ಮುಡಿ, ಮಾನಸ ಮಿತ್ರ ಪರ್ತಾಜೆ ಇವರನ್ನು ಗೌರವಿಸಲಾಯಿತು. ವಲಯದ ವಿದ್ಯಾರ್ಥಿ ಪ್ರತಿಭೆಗಳಾದ ಕರ್ನಾಟಕ ದ.ಕ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರಣಮ್ಯ ಮಾಯಿಲಂಗಿ, 8 ವರ್ಷದ ಕೆಳಗಿನ ಕರಾಟೆ ಚಾಂಪ್ಯನ್‍ಶಿಪ್ ಪಡೆದ ಷಣ್ಮುಖ ಭಟ್ ಕಾಟಿಪಳ್ಳ, ಎಂ.ಟೆಕ್. ರ್ಯಾಂಕ್ ವಿಜೇತೆ ಮಾನಸಮಿತ್ರ ಪರ್ತಾಜೆಯವರನ್ನು ಗುರುತಿಸಲಾಯಿತು. ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ, ಸಂಸ್ಕಾರ ವಿಭಾಗದ ಡಾ.ಸದಾಶಿವ ಭಟ್ ಇಡಿಯಡ್ಕ, ಉಪಾಧ್ಯಕ್ಷ ಗಣೇಶ ಭಟ್ ಕುಂಚಿನಡ್ಕ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.