ಮಂಜೇಶ್ವg: ರಂಗಚೇತನ ಸಂಸ್ಕøತಿ ಕೇಂದ್ರ ಬೆಂಗಳೂರು, ಚೌಟರ ಪ್ರತಿಷ್ಠಾನ ಮೀಯಪದವು ಮತ್ತು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಸಂಸ್ಕøತಿ ಸಚಿವಾಲಯ ಭಾರತ ಸರಕಾರ ಇದರ ಜಂಟಿ ಸಹಯೋಗದಲ್ಲಿ ಮೀಯಪದವಿನ ಚೌಟರ ಚಾವಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯಕ್ಷರಂಗೋತ್ಸವ - 2018 ಎರಡನೆಯ ದಿನವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಚಿನ್ನಾರಿ ಕಾಸರಗೋಡು ಇದರ ನಿರ್ದೇಶಕ ಕಾಸರಗೋಡು ಚಿನಾ, ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಭಾಗವಹಿಸಿದರು. ವೇದಿಕೆಯಲ್ಲಿ ನಂಜುಂಡ ರಂಗಚೇತನ ಸಂಸ್ಕøತಿ ಕೇಂದ್ರ ಬೆಂಗಳೂರು ಇದರ ವ್ಯವಸ್ಥಾಪಕ ಧರ್ಮದರ್ಶಿ ಸ್ವಾಮಿ ತೊಟ್ಟವಾಡಿ ಮತ್ತು ಆರ್. ರಂಗಚೇತನ ಸಂಸ್ಕøತಿ ಕೇಂದ್ರದ ಧರ್ಮದರ್ಶಿ ಆರ್.ನರೇಂದ್ರಬಾಬು ಉಪಸ್ಥಿತರಿದ್ದರು.
ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶ್ರೀಧರ ರಾವ್ ಆರ್.ಎಂ. ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಸಿರಿಬಾಗಿಲು ಕಾಸರಗೋಡು ಇವರಿಂದ ಸುದರ್ಶನ ವಿಜಯ ಎಂಬ ಪೌರಾಣಿಕ ಕಥಾ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.