ಮುಳ್ಳೇರಿಯ : ಕುಂಬಳೆ ಸೀಮೆಯ ಉಪದೇವಸ್ಥಾನಗಳಲ್ಲಿ ಒಂದಾದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಾ. 4ರಂದು ನಡೆಯಲಿರುವ ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದಲ್ಲಿ ನಡೆಸುವವರು ಶ್ರೀ ಕ್ಷೇತ್ರದ ಕಛೇರಿಯನ್ನು ಜ. 15 ಸಂಜೆ 6ಗಂಟೆಯ ಮುಂಚಿತವಾಗಿ ಸಂಪರ್ಕಿಸಿ, ಕಾರ್ಯಕ್ರಮದ ಸಮಗ್ರ ವಿವರವನ್ನೊಳಗೊಂಡ ಅರ್ಜಿಯನ್ನು ನೀಡಬೇಕೆಂದು ಕ್ಷೇತ್ರದ ಪ್ರಕಟನೆಯು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ : 04994-285950 ಸಂಪರ್ಕಿಸಬಹುದು.