ಮುಳ್ಳೇರಿಯ: ಪಾಂಡಿಯ ಅರಣ್ಯ ಪ್ರದೇಶಕ್ಕೆ ಸೇರಿದ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಅತಿಯಾಗಿದೆ.
ಕಳೆದ ಕೆಲವು ದಿನಗಳಿಂದ ಚೂರಲಡ್ಕ ಸಮೀಪದ ಜೆಡಿಯಾರು ಪ್ರದೇಶದಲ್ಲಿ ಎನ್.ಹಸೈನಾರ್, ಮುಹಮ್ಮದ್ ಕುಂಞÂ ಎಂಬವರ ಕೃಷಿ ಪ್ರದೇಶಗಳಿಗೆ ನುಗ್ಗಿದ ಆನೆಗಳು ತೆಂಗು, ಕಂಗು, ಬಾಳೆ ಮೊದಲಾದ ಕೃಷಿಯನ್ನು ವ್ಯಾಪಕವಾಗಿ ನಾಶ ಮಾಡಿವೆ. ಆನೆಗಳ ಕಾಟದಿಂದಾಗಿ ಇವರು ಸಂಬಂಧಿಕರ ಮನೆಗಳಲ್ಲಿ ವಾಸಿಸುವಂತಾಗಿದೆ. ಅನೇಕದಿನಗಳಿಂದ ಪಾಂಡಿ ಪ್ರದೇಶಗಳಲ್ಲಿಯೇ ಕಾಟ ಕೊಡುತ್ತಿರುವ ಆನೆಗಳನ್ನು ಓಡಿಸುವ ಅರಣ್ಯಾ ಇಲಾಖೆಯ ಶ್ರಮವೂ ವಿಫಲಗೊಂಡಿದೆ.ವನ್ಯ ಮೃಗಗಳನ್ನು ಓಡಿಸಲು ರಚಿಸಿದ ಪ್ರತ್ಯೇಕ ತಂಡದ ಸೇವೆಯೂ ಲಭಿಸುತ್ತಿಲ್ಲ. ಹೀಗಾಗಿ ಇಲ್ಲಿನ ಜನರು ಆತಂಕಗೊಂಡಿದ್ದಾರೆ.