ಕಾಸರಗೋಡು: ಜಿಲ್ಲೆಯ ಬಹುಭಾಷಾ ಜನರಿಗೆ ಪ್ರಯೋಜನದಾಯಕ ರೀತಿ ಜಿಲ್ಲೆಯಲ್ಲಿ ಎಫ್.ಎಂ.ರೇಡಿಯೋ ಸ್ಟೇಷನ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.
ಜಿಲ್ಲಾಡಳಿತೆಯು ರಾಜ್ಯ ಯುವಜನ ಕಲ್ಯಾಣ ಮಂಡಳಿ ಸಹಕಾರದೊಂದಿಗೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶ ಇರಿಸಿಕೊಂಡಿದ್ದು, ಈಗಾಗಲೇ ಕ್ರಮ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಪುರಭವನದಲ್ಲಿ ನಡೆದ ಜಿಲ್ಲಾ ಯುವ ಅಧಿವೇಶನದಲ್ಲಿ ಅವರು ಈ ವಿಚಾರ ಘೋಷಿಸಿದರು. ಈ ಸಂಬಂಧ ವರದಿ ನೀಡುವಂತೆ ಜಿಲ್ಲಾ ಯೂತ್ ಕಾರ್ಯಕ್ರಮ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದವರು ಪ್ವರಕಟಣೆಯಲ್ಲಿ ಹೇಳಿರುವರು.