ಪಂದಳಂ: ಶಬರಿಮಲೆ ಶ್ರೀಸನ್ನಿಧಿಗೆ ನಿನ್ನೆ ಮುಂಜಾನೆ ಇಬ್ಬರು ಮಹಿಳೆಯರು ಪ್ರವಶಿಸಿದ್ದನ್ನು ಪ್ರತಿಭಟಿಸಿ ನಡೆದ ಮೆರವಣಿಗೆಯಲ್ಲಿ ಕಲ್ಲುತೂರಾಟದಿಂದ ಗಾಯಗೊಂಡಿದ್ದ ಓರ್ವ ವ್ಯಕ್ತಿ ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ಶಬರಿಮಲೆ ಕರ್ಮ ಸಮಿತಿ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಶಬರಿಮಲೆ ಕರ್ಮಸಮಿತಿ ಕಾರ್ಯಕರ್ತನಾದ ಚಂದ್ರನ್ ಉಣ್ಣಿತ್ತಾನ್(55) ಮೃತ ದುರ್ದೈವಿ.
ಬುಧವಾರ ಬೆಳಿಗ್ಗೆ ಶಬರಿಮಲೆ ಪರಿಸರದಲ್ಲಿ ನಡೆದ ಪ್ರತಿಭಟನೆಯ ವೇಳೆ ಚಂದ್ರನ್ ಉಣ್ಣಿತ್ತಾನ್ ಗಂಭೀರ ಗಾಯಗೊಂಡಿದ್ದರು.ಬಳಿಕ ಆಸ್ಪತ್ರೆಯಲ್ಲಿ ಸಂಜೆ ವೇಳೆ ನಿಧನರಾದರು.
ಕಠಿಣ ಭದ್ರತೆ:
ಇಂದು ರಾಜ್ಯಾದ್ಯಂತ ಶಬರಿಮಲೆ ಕರ್ಮ ಸಮಿತಿ ನೀಡಿರುವ ಹರತಾಳದಕಾರಣ ವ್ಯಾಪಕ ಬಿಗು ಭದ್ರತೆಗೆ ಪೋಲೀಸ್ ಉನ್ನತ ಮೂಲಗಳು ರೂಪುನೀಡಿದೆ.ಎಲ್ಲಾ ಜಿಲ್ಲೆಗಳ ಎಲ್ಲಾ ಠಾಣೆಗಳಲ್ಲೂ ಹೈಅಲರ್ಟ್ ಘೋಶಿಸಲಾಗಿದೆ. ತುರ್ತು ಸಂದರ್ಭ ಪೋಲೀಸರು ಅಗತ್ಯ ನಿರ್ಧಾರ ಕೈಗೊಳ್ಳುವ ಹಕ್ಕು ಪಡೆದಿರುವುದಾಗಿ ತಿಳಿದುಬಂದಿದೆ.