ಬೀಜಿಂಗ್: ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.
ಚೀನಾ ಸೇನೆ ತನ್ನ ಸಾಮಥ್ರ್ಯವನ್ನು ಹೆಚ್ಚಿಕೊಳ್ಳುವುದಕ್ಕೆ ಹಾಗೂ ತುರ್ತು ಯುದ್ಧಕ್ಕಾಗಿ ಸೇನೆ ಯಾವಾಗಲೂ ತಯಾರಿರುವಂತೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆದೇಶಿಸಿದ್ದಾರೆ.
ಜಿನ್ಪಿಂಗ್ ತಮ್ಮ ಅಧೀನದಲ್ಲಿರುವ ಚೀನಾ ಸೇನೆಯ ಕಾರ್ಯತಂತ್ರ ಮತ್ತು ಯುದ್ಧತಂತ್ರದ ಯೋಜನೆಯನ್ನು ಹೆಚ್ಚಿಸಲು ಹಾಗೂ ಜಂಟಿ ಕಾರ್ಯಾಚರಣೆ ಸಾಮಥ್ರ್ಯ ಮತ್ತು ತುರ್ತು ಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಿದ್ಧತೆಗಳನ್ನು ಹೆಚ್ಚಿಸಲು ಸೇನೆಗೆ ಆದೇಶಿಸಲಾಗಿದೆ ಎಂದು ಸರ್ಕಾರಿ ಒಡೆತನದ ಚೀನಾ ಡೈಲಿ ನ್ಯೂಸ್ ಪೇಪರ್ ವರದಿ ಮಾಡಿದೆ.