HEALTH TIPS

ಕಾವಲು ಕಾಯುವ ಕೆಲಸವನ್ನು ಅಕಾಡೆಮಿಗಳು ಮಾಡಬೇಕು : ರಾಧಾಕೃಷ್ಣ ಕಲ್ಚಾರ್


       ಕಾಸರಗೋಡು: ಯಾವುದೇ ರಂಗಭೂಮಿಯಲ್ಲಿ ಪರಿವರ್ತನೆ ಸಹಜ. ಅಂತಹ ಪರಿವರ್ತನೆ ರಂಗಭೂಮಿಯ ಮೂಲ ಸ್ವರೂಪವನ್ನು ಬದಲಾಯಿಸದಂತೆ ಮತ್ತು ಆ ಮಾಧ್ಯಮದ ಅಭಿವ್ಯಕ್ತಿಯ ಶೈಲಿಯನ್ನು ಕಾಪಿಟ್ಟುಕೊಳ್ಳುವಂತೆ ಕಾವಲು ಕಾಯುವ ಕೆಲಸವನ್ನು ಅಕಾಡೆಮಿಗಳಂತಹ ಸಂಸ್ಥೆಗಳು ಮಾಡುವ ಅಗತ್ಯವಿದೆ ಎಂದು ಲೇಖಕ, ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು.
       ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಲಲಿತಕಲಾ ಸದನದಲ್ಲಿ ಆಯೋಜಿಸಿದ ವಿಚಾರಸಂಕಿರಣದಲ್ಲಿ `ತಾಳಮದ್ದಳೆ' ಕುರಿತಾಗಿ ಉಪನ್ಯಾಸ ನೀಡಿ ಮಾತನಾಡಿದರು.
      ಯಾವುದೇ ರಂಗದಲ್ಲಿ ಒಬ್ಬ ಉತ್ಕøಷ್ಟ ಕಲಾವಿದ ಸೃಷ್ಟಿಯಾಗಬೇಕಾದರೆ ಅಂತಹ ಯೋಗ್ಯತೆ ಇರುವವರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಅಗತ್ಯವಿರುತ್ತದೆ. ತಾಳಮದ್ದಳೆಗೆ ಅನೇಕ ಊರುಗಳಲ್ಲಿದ್ದ ಯಕ್ಷಗಾನ ಸಂಘಗಳು ತರಬೇತಿ ಕೇಂದ್ರಗಳಾಗಿದ್ದುವು. ಅಂತಹ ತರಬೇತಿ ಕೇಂದ್ರಗಳಲ್ಲಿ ಸಿದ್ಧರಾದ ಕಲಾವಿದರು ಇದರ ಶ್ರೀಮಂತಿಕೆಯನ್ನು ಹೆಚ್ಚಿಸುವ ಸಾಮಥ್ರ್ಯವುಳ್ಳವರು. ಹಾಗಾಗಿ ಇಂತಹ ಸಂಘಗಳಿಗೆ ಪುನಶ್ಚೇತನ ನೀಡುವ ಕೆಲಸ ನೀಡಬೇಕಾಗಿದೆ ಎಂದರು.
      ಜಾಗೃತಿ ಅಗತ್ಯ : `ಬಯಲಾಟ' ಬಗ್ಗೆ ಉಪನ್ಯಾಸ ನೀಡಿದ ಡಾ.ಶ್ರುತಕೀರ್ತಿರಾಜ್ ಉಜಿರೆ ಮಾತನಾಡಿ ಯಕ್ಷಗಾನದ ಎಲ್ಲಾ ವಿಭಾಗಗಳ ಕುರಿತು ಜಾಗೃತಿ ಆಗಬೇಕು. ಹೊಸ ಪೀಳಿಗೆಯಲ್ಲಿ ಯಕ್ಷಗಾನದ ಮೂಲ ಸ್ವರೂಪದ ಬಗ್ಗೆ ಅರಿವು ಬೇಕು. ಇದಕ್ಕೆ ಅಕಾಡೆಮಿ ಪ್ರಾದೇಶಿಕ ಸಂಘ ಸಂಸ್ಥೆಗಳ ಮೂಲಕ ಅರಿವು ಶಿಬಿರಗಳನ್ನು ಮಾಡಿಸಬಹುದು. ಬದಲಾವಣೆಯಲ್ಲಿ ಕಲೆಯ ಮೂಲ ಸ್ವರೂಪ ಅಳಿಯಬಾರದು ಎಂದರು.
       ಮೂಲಸ್ವರೂಪಕ್ಕೆ ದಕ್ಕೆಯಾಗಕೂಡದು : ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾವಿದ, ಪ್ರಸಂಗಕರ್ತರಾದ ಮಧೂರು ವೆಂಕಟಕೃಷ್ಣ ಅವರು ಮಾತನಾಡಿ, ಯಕ್ಷಗಾನವು ಸಮಗ್ರ ಕಲೆ. ವಿನೋದ ಮತ್ತು ಪ್ರಬೋಧ ನೀಡಬಲ್ಲುದು. ಪ್ರಸಂಗ ಮರವಿದ್ದಂತೆ. ಕಲಾವಿದರ ವಿಭಿನ್ನ ಮನೋಧರ್ಮವನ್ನನುಸರಿಸಿ ಹೊಸ ಹೊಸ ಚಿಗುರು ಬಿಟ್ಟು ನಿತ್ಯನೂತನವಾಗಿ ಉಳಿಯ ಬಲ್ಲುದು. ಕಲಾವಿದನಲ್ಲಿ ಪ್ರತ್ಯುತ್ಪನ್ನ ಮತಿತ್ವವಿರಬೇಕು. ಭಾವನೆ ಇರಬೇಕು. ಅತಿರೇಕವಿರಕೂಡದು. ಪರಿವರ್ತನೆ ಸ್ವೀಕಾರಾರ್ಹ. ಆದರೆ ಮೂಲಸ್ವರೂಪಕ್ಕೆ ದಕ್ಕೆಯಾಗಕೂಡದು. ನಿಶ್ಚಲವಾಗಿ ಕುಳಿತು ನಿರರ್ಗಳವಾಗಿ ಮಾತನಾಡುವವ ಅರ್ಥಧಾರಿಯಲ್ಲ. ಕಂಠತ್ರಾಣವುಳ್ಳವ ಭಾಗವತನಲ್ಲ. ಸೊಂಟ ತ್ರಾಣವುಳ್ಳವ ವೇಷಧಾರಿಯೂ ಅಲ್ಲ. ಅರ್ಥಧಾರಿ ಪಾತ್ರಗಳ ಒಳಹೊಕ್ಕು ನೋಡಬೇಕೇ ವಿನಹ ತಾನೇ ಪಾತ್ರವಾಗಕೂಡದು. ಬಯಲಾಟದಲ್ಲಿ ಕಲಾಸರಸ್ವತಿ ಸಾಲಂಕೃತೆ. ತಾಳಮದ್ದಳೆಯಲ್ಲಿ ನಿರಾಭರಣ ಸುಂದರಿ ಎಂದರು.
        ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು, ಉದ್ಯಮಿ ರಾಂ ಪ್ರಸಾದ್ ಶುಭಹಾರೈಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries