ಉಪ್ಪಳ: ಫೆ.18 ರಿಂದ 24 ರವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಸಂಪನ್ನಗೊಳ್ಳಲಿರುವ ಅತ್ಯಪೂರ್ವವಾದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಹವಿಸ್ಸಿನ ದಿವ್ಯಾನ್ನಕ್ಕಾಗಿ ಭತ್ತ ಕುಟ್ಟುವ ಮುಹೂರ್ತ ಜರಗಿತು.
ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಗಾಯತ್ರೀ ಮಾತೃ ಮಂಡಳಿಯ ಸದಸ್ಯೆಯರು ಆಶ್ರಮದಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಭತ್ತವನ್ನು ಒನಕೆಯಲ್ಲಿ ಕುಟ್ಟುವುದರ ಮೂಲಕ ಸೇವೆ ಸಲ್ಲಿಸಿದರು.