ಉಪ್ಪಳ: ನಮ್ಮನ್ನು ಹೊತ್ತು ಹೆತ್ತು ಸಲಹುವ ತಾುಯನ್ನು ದೇವರೆಂದು ಪೂಜಿಸುವ ಸಂಸ್ಕøತಿ ನಮ್ಮದು ಇಂತಹ ಮಾನವೀಯ ಸಂಬಂಧಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಸನಾತನ ಧರ್ಮದ ಚಿಂತನೆಗಳ ತಳಹದಿಯಲ್ಲಿ ಆಧುನಿಕ ಸಮಾಜವನ್ನು ಕಟ್ಟಿ ಬೆಳೆಸುವ ಧ್ಯೇಯವನ್ನಿರಿಸಿಕೊಂಡು ನಡೆಯುತ್ತಿರುವ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ತಾಯಿಯ ತ್ಯಾಗವನ್ನೂ ಪಾವಿತ್ರ್ಯವನ್ನೂ ಸಾರುವ ವಿಶಿಷ್ಟವಾದ "ಮಾತೃಪೂಜನ, ಮಾತೃಭೋಜನ" ಕಾರ್ಯಕ್ರಮ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಾತೃಪೂಜನ ಕಾರ್ಯಕ್ರಮದ ಅಂಗವಾಗಿ ಮಕ್ಕಳು ತಮ್ಮ ತಾಯಂದಿರ ಪಾದಪೂಜೆಯನ್ನು ಮಾಡಿ ಆರತಿ ಬೆಳಗಿ ಆಶೀರ್ವಾದ ಪಡೆದರು. ಬಳಿಕ ನಡೆದ "ಮಾತೃಭೋಜನ" ಕಾರ್ಯಕ್ರಮದಲ್ಲಿ ಮಾತೆಯರು ಮಕ್ಕಳಿಗೆ ಕೈತುತ್ತು ನೀಡಿದರು.
ಶಾಲಾ ಮಾತೃಸಮಿತಿಯ ಅಧ್ಯಕ್ಷೆ ಆಶಾ ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾದ ಮಂಗಳೂರಿನ ಚೀರುಂಬಾ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷೆ ಶಾಂತಾ ಅವರು ಮಕ್ಕಳನ್ನು ಬೆಳೆಸುವಲ್ಲಿ ತಾಯಿ ತೋರುವ ಕಾಳಜಿಯನ್ನೂ, ತ್ಯಾಗವನ್ನೂ ವಿವರಿಸಿ ವಿಶಿಷ್ಟವಾದ ಕಾರ್ಯಕ್ರಮವನ್ನು ಆಚರಿಸುತ್ತಿರುವ ಸಂಸ್ಥೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಅತಿಥಿ ಕುಕ್ಕಾಡಿ ಮಹಿಳಾವೇದಿಕೆಯ ಅಧ್ಯಕ್ಷೆ ಸುಜಾತಾ ಚಂದ್ರಶೇಖರ್ ಅವರು ತಾಯಿಯ ಮೇಲಿನ ಆದರಾಭಿಮಾನಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನಿತ್ಯಾನಂದ ಯೋಗಾಶ್ರಮದ ಕಾರ್ಯಕರ್ತೆ ಕಮಲಾಕ್ಷಿ ಮೋನಪ್ಪ ಭಂಡಾರಿ, ಶಾಲಾ ಕ್ಷೇಮಸಮಿತಿಯ ಅಧ್ಯಕ್ಷ ರಘುರಾಮ್, ಶಿಶುವಾಟಿಕಾ ಮಾತೃಸಮಿತಿಯ ಅಧ್ಯಕ್ಷೆ ತುಳಸಿ ಹಾಗೂ ಶಾಲಾ ಮುಖ್ಯಶಿಕ್ಷಕಿ ವಾರಿಜಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ರೀಡಾಕೂಟ ಹಾಗೂ ಶಾಲಾ ಕಲಾಮೇಳದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರಾದ ಕು. ಗಾಯತ್ರೀ ಹಾಗೂ ಅಜಿತಶ್ರೀ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಿಕ್ಷಕಿ ರೇಖಾ ಪ್ರದೀಪ್ ನಿರೂಪಿಸಿದರು. ಶಿಕ್ಷಕಿಯರಾದ ರೇಶ್ಮಾ ಎಸ್ ಸ್ವಾಗತಿಸಿ, ಸುನೀತಾ ಕೆ ವಂದಿಸಿದರು.