ಕುಂಬಳೆ: ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠ ಶ್ರಾವಣಕೆರೆ ಸಭಾ0ಗಣದಲ್ಲಿ ಇತ್ತೀಚೆಗೆ ಜರಗಿತು.
ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು.ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು.
ಶ್ರಾವಣಕೆರೆ ಮಠದಲ್ಲಿ ಜನವರಿ 16 ರಿ0ದ 20 ರ ತನಕ ಜರಗಲಿರುವ ಬ್ರಹ್ಮಕಲಶೋತ್ಸವ ಸಮಾರ0ಭದ ಕುರಿತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಹೆಬ್ಬಾರರು ಮಾಹಿತಿಗಳನ್ನಿತ್ತರು. ಮಂಡಲಾಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ ಇವರು ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ಭಜನಾ ರಾಮಾಯಣ, ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.