ಮಂಜೇಶ್ವರ: ಇತಿಹಾಸ ಪ್ರಸಿದ್ದ ಅತೀ ಪುರಾತನವಾದ, ಮಹರ್ಷಿ ಕಣ್ವರಿಂದ ಪೂಜಿಸಲ್ಪಟ್ಟ ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ದೇವಸ್ಥಾನದ ನೂತನ ಸುತ್ತು ಪೌಳಿಯನ್ನು ದೇವರಿಗೆ ಸಮರ್ಪಣೆ ಕಲಶಾಭಿಷೇಕ ಕಾರ್ಯಕ್ರಮಗಳು ವಿವಿಧ ವಿಧಿವಿಧಾನಗಳೊಂದಿಗೆ ಜ.23 ರಂದು ನಡೆಯಲಿದೆ. ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಪೇಜಾವರ ಶ್ರೀಅಧೋಕ್ಷಜ ಮಠದ ಹಿರಿಯ ಶ್ರೀಗಳಾದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಶುಕ್ರವಾರ ಬಿಡುಗಡೆಗೊಳಿಸಿದರು.
ತಲಪಾಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಣ್ವತೀರ್ಥ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣ ಭಟ್, ಸುಧಾಕರ ರಾವ್ ಪೇಜಾವರ, ಕೃಷ್ಣಪ್ಪ ಬೆಂಗರೆ, ಮಧುಸೂದನ ಆಚಾರ್ಯ, ಶ್ರೀಸಿವಾಸ ಸಿ.ಉದ್ಯಾವರ, ಜನಾರ್ಧನ ದೊಡ್ಡಮನೆ, ಅರ್ಚಕ ರಮೇಶ್ ಉಪಾಧ್ಯಾಯ, ವೆಂಕಟೇಶ ಭಟ್ ತಲಪಾಡಿ, ಕಾರ್ಯದರ್ಶಿಗಳಾದ ಬಾಲಕೃಷ್ಣ ರಾಮಾಡಿ, ಕಿಶನ್ ಕುಲಾಲ್ ಕಣ್ವತೀರ್ಥ, ಸೋಮಪ್ಪ ಮಾಸ್ತರ್, ಕುಸುಮ ಟೀಚರ್, ಜಗದೀಶ ಕುಲಾಲ್, ಮಾಧವ ರಾಮಾಡಿ, ಪ್ರೇಮಾ ಹೊನ್ನೆ, ಕಿರಣ್ ಕುಮಾರ್ ಉಳಿಯ, ಕೋಶಾಧಿಕಾರಿ ಗೋಪಾಲ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.