ಬದಿಯಡ್ಕ: ಉಪ್ಪಂಗಳ ಟ್ರಸ್ಟ್ - ಕ್ರಿಯೇಟಿವ್ ಕಾಲೇಜು, ಕೆ.ವಿ.ವಿ.ಇ.ಎಸ್. ನಾರಂಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ರೆಡ್‍ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಬದಿಯಡ್ಕ ಕ್ರಿಯೇಟಿವ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆ¬ತು.
ಉಪ್ಪಂಗಳ ಟ್ರಸ್ಟ್‍ನ ಟ್ರಸ್ಟಿ, ಉದ್ಯಮಿ ನಿತ್ಯಾನಂದ ಶೆಣೈ ಶಿಬಿರವನ್ನು ಉದ್ಘಾಟಿಸಿದರು. ಕೆ.ವಿ.ವಿ.ಇ.ಎಸ್. ನಾರಂಪಾಡಿ ಘಟಕದ ಅಧ್ಯಕ್ಷ ದಿವಾಕರ ನಾರಂಪಾಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್.ಎನ್.ಪ್ರಸಾದ್ ಹಾಗು ಪ್ರಾಂಶುಪಾಲ ಶಿವದಾಸ್ ಸಿ.ಎಚ್. ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಇನ್ನೋರ್ವ ಅತಿಥಿ ಮಂಗಳೂರಿನ ಖ್ಯಾತ ವೈದ್ಯ ಡಾ.ಜೆ.ಎನ್.ಭಟ್ ಮಾತನಾಡಿ ರಕ್ತದಾನ ಮಾಡಿದರೆ ಆರೋಗ್ಯ ಉತ್ತಮವಾಗುತ್ತದೆ. ರಕ್ತದಾನ ಎಂಬುದು ಸಾಮಾಜಿಕ ಚಿಂತನೆಯೂ ಹೌದು ಎಂದರು. ರೆಡ್‍ಕ್ರಾಸ್ ಮಂಗಳೂರಿನ ಪ್ರಬಂಧಕ ಎಡ್ವರ್ಡ್ ಮಾತನಾಡಿ ರಕ್ತದಾನ ಶಿಬಿರಗಳಿಂದ ಅಪರೂಪದ ರಕ್ತದ ಗುಂಪುಗಳು ಲಭ್ಯವಾಗುತ್ತವೆ. ಇದು ತುಂಬ ಉಪಕಾರಿ ಎಂದರು.
ಮೈತ್ರಿ ಕಾಸರಗೋಡಿನ ಪ್ರಕಾಶ್ ನಾಯಕ್, ಉಪ್ಪಂಗಳ ಟ್ರಸ್ಟ್‍ನ ಬಾಲಗೋಪಾಲ ಶರ್ಮ, ಶ್ರೀಹರಿ ಭಟ್ ಸಜಂಗದ್ದೆ, ಕಾಲೇಜಿನ ಅಧ್ಯಾಪಕ ಸುನಿಲ್, ಭಾಸ್ಕರ, ಪ್ರಕಾಶ್, ರವಿರಾಜ್ ಎಂ., ಶಾಂ ಲಾಲ್, ಜಯಚಂದ್ರ, ನಯನ್, ಮಾನಸ, ಸ್ಮಿತಾ, ಧನ್ಯ, ಸೌಮ್ಯ, ರಮ್ಯ ಹಾಗು ಕೆವಿವಿಇಎಸ್‍ನ ಶ್ರೀಧರ ಪದಮಾರು, ರಾಜು ಶರ್ಮ ಉಪ್ಪಂಗಳ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮ ಉಪ್ಪಂಗಳ ಪ್ರಾಸ್ತಾವಿಕ ನುಡಿದು ಸ್ವಾಗತಿಸಿ, ಗೋಪಾಲಕೃಷ್ಣ ಸಿ.ಎಚ್. ವಂದಿಸಿದರು. ಮಧುಶ್ರೀ ಪ್ರಾರ್ಥಿಸಿದರು. 80 ಜನರು ರಕ್ತದಾನ ಮಾಡಿದರು. ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದ ಸಂರ್ಪೂಣ ಸಹಕಾರದಿಂದ ಶಿಬಿರ ಯಶಸ್ವಿಯಾಯಿತು.