HEALTH TIPS

ದುಡಿವ ಮನಸ್ಸಿದ್ದರೆ ಮಣ್ಣೆಲ್ಲ ಹೊನ್ನು...ಹೊನ್ನು... ನಾಡಿಗೆ ಮಾದರಿಯಾದ ಶಾಲಾ ಮಕ್ಕಳು


    ಕಾಸರಗೋಡು: ಮಣ್ಣಲ್ಲಿ ಹೊನ್ನು ಬೆಳೆಯುವ ಮೂಲಕ ಶಾಲಾ ವಿದ್ಯಾರ್ಥಿಗಳು ನಾಡಿಗೆ ಮದರಿಯಾಗಿದ್ದಾರೆ. ಜಿಲ್ಲೆಯ ಕುಂಬಳರ್ಪಲೀ ಕರಿಂಬಿಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ವಂತ ದುಡಿಮೆಯ ಫಲ ಕಂಡು ಈ ರೀತಿಯ ಸಾತ್ವಿಕ ಸಂತೋಷ ಅನುಭವಿಸುತ್ತಿದ್ದಾರೆ.
    45 ದಿನಗಳ ದುಡಿಮೆ : ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‍ನಲ್ಲಿರುವ ಈ ಶಾಲೆಯ 70 ಸೆಂಟ್ಸ್ ಜಾಗದಲ್ಲಿ ಜೈವಿಕ ರೀತಿಯ ತರಕಾರಿ ಕೃಷಿ ಫಲ ಕಂಡಿದೆ. ಸುಮಾರು 300 ವಿದ್ಯಾರ್ಥಿಗಳು ಇಲ್ಲಿ ಕಲಿಕೆ ನಡೆಸುತ್ತಿದ್ದಾರೆ. ಕಳೆದ ವರ್ಷ ಡಿ.14ರಂದು ಆರಂಭಿಸಿದ ತರಕಾರಿ ಕೃಷಿ 45 ದಿನಗಳಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದೆ.
ಲಭಿಸಿದ್ದು 500 ಕಿಲೋ : 500 ಕಿಲೋ ತರಕಾರಿ ಈ ಮೂಲಕ ಲಭಿಸಿದೆ ಎಂದು ಗಣನೆ ಮಾಡಲಾಗಿದೆ. ಇನ್ನೂ ಒಂದು ತಿಂಗಳ ಅವ„ಯಲ್ಲಿ ಫಸಲು ಕೊಯ್ಲು ನಡೆಯಲಿದೆ. ಈ ವೇಳೆ ಕನಿಷ್ಠ 400 ಕಿಲೋ ತರಕಾರಿಯ ನಿರೀಕ್ಷೆಯಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.
   ಸದುದ್ದೇಶದ ಕಾಯಕ : ಶಾಲೆಯಲ್ಲಿ ರಚಿಸಿರುವ ಹರಿತ ಕ್ಲಬ್ ಸದಸ್ಯರಾಗಿರುವ ವಿದ್ಯಾರ್ಥಿಗಳು ಕೃಷಿ ನಡೆಸುತ್ತಿದ್ದಾರೆ. ಕೃಷಿ ಇಲಾಖೆಯ ತರಕಾರಿ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿ ಶಾಲೆಯ ಆವರಣದ ಜಾಗದಲ್ಲಿ ಕೃಷಿ ನಡೆಸಲಾಗಿದೆ. ವಿಷಯುಕ್ತ ತರಕಾರಿಯಿಂದ ನಾಡನ್ನು ಮುಕ್ತಗೊಳಿಸಬೇಕು ಎಂಬ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮತ್ತು ಮುಂದಿನಜನಾಂಗದಲ್ಲಿ ಕೃಷಿ ಬಗ್ಗೆ ಆಸಕ್ತಿ ಹುಟ್ಟಿಸುವ ಸದುದ್ದೇಶಗಳಿಂದ ಇಲ್ಲಿ ಕೃಷಿ ನಡೆಸಲಾಗಿದೆ.
     ಬಗೆ ಬಗೆ ತರಕಾರಿಗಳು : ಬೆಂಡೆ, ಹರಿವೆ, ಟೊಮೆಟೊ, ಹಸಿಮೆಣಸು, ಬದನೆ, ಪಡುವಲ, ಕಲ್ಲಂಗಡಿ, ಸೌತೆಕಾಯಿ ಸಹಿತ ಅನೇಕ ತರಕಾರಿಗಳನ್ನು ಇಲ್ಲಿ ಬೆಳೆಯಲಾಗಿದೆ. ಕೃಷಿ ಇಲಾಖೆಯ ತರಕಾರಿ ನರ್ಸರಿಯಲ್ಲಿ ಮೊಳಕೆ ಬರಿಸಲಾದ ಬೀಜಗಳನ್ನು ತಂದು ಇಲ್ಲಿ ನೆಡಲಾಗಿತ್ತು.
    ಇಲ್ಲಿ ಬೆಳೆಯಲಾದ ತರಕಾರಿಯನ್ನು ಶಾಲೆಯ ಮಧ್ಯಾಹ್ನದ ಭೋಜನಕ್ಕೆ ಬಳಸಲಾಗುತ್ತಿದೆ. ಉಳಿದ ತರಕಾರಿಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಹಂಚಲಾಗುತ್ತಿದೆ. 
      ಸಾದ್ಯಂತ ಜೈವಿಕ : ಸೆಗಣಿ, ಕಡ್ಲೆಹಿಂಡಿ, ಎರೆ ಗೊಬ್ಬರ, ಹಸಿರೆಲೆ ಕಷಾಯ ಇತ್ಯಾದಿ ಇಲ್ಲಿ ಪೆÇೀಷಕಾಂಶವಾಗಿ ಒದಗಿಸಲಾಗಿತ್ತು. ಕೀಟಗಳ, ರೋಗಗಳ ನಿಯಂತ್ರಣಕ್ಕೆ ಗೋಮೂತ್ರ, ಗಾಂ`Áರಿ ಮೆಣಸಿನ ಮಿಶ್ರಣ, ಬೇವಿನಹಿಂಡಿ ಇತ್ಯಾದಿಗಳನ್ನು ಬಳಸಲಾಗಿದೆ.
     ಕೃಷಿ ಇಲಾಖೆ ಸಹಕಾರ : ತರಕಾರಿ ಬೆಳೆಯ ಜೊತೆಗೆ ಕೃಷಿ `Àವನದ ನೇತೃತ್ವದಲ್ಲಿ ಮಕ್ಕಳಿಗೆ ಜೈವಿಕ ಗೊಬ್ಬರ, ಕೀಟನಶಕ ತಯಾರಿ ಬಗ್ಗೆ ತರಬೇತಿ ಒದಗಿಸಲಾಗಿದೆ. ವಾರಕೊಮ್ಮೆ ಕೃಷಿಯ ಪ್ರಗತಿ ವೀಕ್ಷಣೆ, ಸಲಹೆ ನೀಡಿಕೆಗೆ ವಿದ್ಯಾರ್ಥಿಗಳ ಮನವಿ ಮೇರೆಗೆ ಕೃಷಿ ಇಲಾಖೆ ಸಿಬ್ಬಂದಿ ಶಾಲೆಗೆ ಹಾಜರಾಗಿದ್ದರು.
     ನೀರಿನ ಮಿತ ಬಳಕೆ : ನೀರಾವರಿಗೆ ಹನಿನೀರು ಯೋಜನೆ ಬಳಸಲಾಗಿತ್ತು. ಪ್ರತಿ ಸಸಿಯ ಬುಡಕ್ಕೆ ಮಾತ್ರ ನೀರು ಒದಗುವ ರೀತಿ ಇದಾಗಿದೆ. ಈ ಮೂಲಕ ಬಹಳ ಕಡಿಮೆ ನೀರು ಸಾಕಾಗಿ ಬಂದಿತ್ತು. ಜೊತೆಗೆ ಕಳೆ ಗಿಡಗಳು ಬೆಳೆಯುವ ಸಾಧ್ಯತೆಯೂ ಕಡಿಮೆಯಿರುತ್ತದೆ.
      ಒಟ್ಟಂದದಲ್ಲಿ ಇರುವ ಜಾಗವನ್ನು ಸದುಪಯೋಗ ಪಡಿಸಿ ಪ್ರಕೃತಿಗೆ ಪೂರಕವಾದ ಕೃಷಿ ನಡೆಸಿ ಯಶೋಗಾಥೆ ನಡೆಸಿದ ಶಾಲಾ ಮಕ್ಕಳು ಯತ್ನದಲ್ಲಿ ಸಫಲರಾಗಿದ್ದಾರೆ. ಇವರ ಯತ್ನಕ್ಕೆ ಬೆಂಬಲ ನೀಡಿದ ಶಿಕ್ಷಕರು ಮಾದರಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries