ಮಂಜೇಶ್ವರ: ಬಿದಿರು ಕೃಷಿ ಸಂಬಂಧ ಒಂದು ದಿನದ ತರಬೇತಿ ಶಿಬಿರ ವರ್ಕಾಡಿ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಜರುಗಿತು.
ಗ್ರಾಮ ಪಂಚಾಯತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವತಿಯಿಂದ ಸಮಾರಂಭ ಜರುಗಿತು. ಯೋಜನೆಯ ಮೇಟ್, ಎಡಿಎಸ್ ಮತ್ತು ಕಾರ್ಮಿಕರಿಗಾಗಿ ಈ ತರಬೇತಿ ನಡೆಸಲಾಯಿತು.
ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು. ಉಪಾಧ್ಯಕ್ಷೆ ಸುನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಹಮತ್ ರಝಾಕ್, ಕಲ್ಯಾಣ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ ಕೆ., ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತಾ ಡಿಸೋಜಾ, ವಾರ್ಡ್ ಸದಸ್ಯರು, ಮಂಜೇಶ್ವರ ಬ್ಲಾಕ್ ಅಭಿವೃದ್ದಿ ಅಧಿಕಾರಿ ನೂತನ ಕುಮಾರಿ ಎ.ಇ., ಗ್ರಾಮ ಪಂಚಾಯತಿ ಸಹ ಕಾರ್ಯದರ್ಶಿ ರಾಧಾಕೃಷ್ಣ ಪಿಳ್ಳೆ, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತಿ ಸಹಾಯಕ ನಿರ್ದೇಶಕ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಕೆ. ತರಬೇತಿ ನೀಡಿದರು.ಗ್ರಾ.ಪಂ. ಪಂಚಾಯತ್ ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿ, ವಂದಿಸಿದರು.