ಬದಿಯಡ್ಕ: ಬದಿಯಡ್ಕ ಶ್ರೀಮಾತಾ ಹವ್ಯಕ ಭಜನ ಸಂಘದ ವತಿಯಿಂದ ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸೋಮವಾರ ಭಿಕ್ಷಾ ಸೇವೆ ನೆರವೇರಿಸಲಾಯಿತು.
ಭಜನಾ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆ ದಂಪತಿಗಳು ಗೋಪೂಜೆ, ಶ್ರೀಗುರುಭಿಕ್ಷೆ, ಪಾದುಕಾ ಪೂಜೆ ನಡೆಸಿದರು. ಬೆಳಿಗ್ಗೆ ಶ್ರೀರಾಮ ದೇವರ ಮುಂಭಾಗದಲ್ಲಿ ತಂಡದ ವತಿಯಿಂದ 1 ಗಂಟೆಗಳ ಕಾಲ ಭಜನಾ ಸಂಕೀರ್ತನಾ ಸೇವೆ ನಡೆಸಲಾಯಿತು. ಫಲಸಮರ್ಪಣೆಯ ನಂತರ ಶ್ರೀಗಳವರು ಭಜನ ತಂಡಕ್ಕೆ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಭಜನಾ ಸಂಘದ ಅಧ್ಯಕ್ಷೆ ಜಯಶ್ರೀ ಪಿ. ಹಾಗೂ ಭಜನಾ ತಂಡ ಸದಸ್ಯರು ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದವನ್ನು ಪಡೆದುಕೊಂಡರು.