ಉಪ್ಪಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ವಾರ್ಷಿಕೋತ್ಸವ ಸಮಾರಂಭ ಹಾಗೂ ಉಪ್ಪಳ ಘಟಕದ ವತಿಯಿಂದ ಉಚಿತ ಯಕ್ಷಗಾನ ತರಬೇತಿ ಹೊಂದಿದ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ವಿದ್ಯಾರ್ಥಿಗಳ ರಂಗಪ್ರವೇಶ ಜ. 27ರಂದು ಅಪರಾಹ್ನ 3.30ರಿಂದ ಕೊಂಡೆವೂರು ಯೋಗಾಶ್ರಮದಲ್ಲಿ ಜರಗಲಿದೆ. ಯಕ್ಷ ಗುರು ರಾಮ ಸಾಲ್ಯಾನ್ ಮಂಗಲ್ಪಾಡಿ ಯವರಿಂದ ತರಬೇತಿ ಹೊಂದಿದ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ಕೊಂಡೆಯೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀರಾಮ ಟ್ರಾನಸ್ಪೊರ್ಟ್ಸ್ ಫೈನಾನ್ಸ್ ಕಂಪೆನಿಯ ಪ್ರಧಾನ ಪ್ರಬಂಧಕ ಶರತ್‍ಶ್ಚಂದ್ರ ಭಟ್ ಕಾಕುಂಜೆ, ಕೊಂಡೆವೂರು ವಿದ್ಯಾಪೀಠದ ನಿಕಟಪೂರ್ವ ಮುಖ್ಯ ಶಿಕ್ಷಕಿ ಪ್ರತಿಭಾ ಶ್ರೀಧರ್, ಕೊಂಡೆವೂರು ವಿದ್ಯಾ ಪೀಠದ ಅಧ್ಯಕ್ಷ ರಾಮಚಂದ್ರ ಸಿ ಭಾಗವಹಿಸಲಿದ್ದು ಯಕ್ಷಗಾನ ಗುರುಗಳಾದ ರಾಮಸಾಲ್ಯಾನ್ ಮಂಗಲ್ಪಾಡಿ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಅಧ್ಯಕ್ಷ ಯಕ್ಷದ್ರುವ ಸತೀಶ ಶೆಟ್ಟಿ ಪಟ್ಲ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ.ಎ. ಸುಧೇಶ ಕುಮಾರ್ ರೈ, ಹಾಗೂ ಉಪ್ಪಳ ಘಟಕದ ಗೌರವ ಅಧ್ಯಕ್ಷ ಪಿ.ಆರ್.ಶೆಟ್ಟಿ.ಪೊಯ್ಯೆಲು, ಅಧ್ಯಕ್ಷ ಸುರೇಶ ಶೆಟ್ಟಿ ಬಳಕ, ಹಾಗೂ ಗೌರವ ಸಲಹೆಗಾರ ಡಾ. ಶ್ರೀಧರ ಭಟ್ ಉಪ್ಪಳ, ನಾರಾಯಣ ಶೆಟ್ಟಿ ಬೊಳ್ಳಾರು, ದೇವಕಾನ ಕೃಷ್ಣ ಭಟ್, ಮೀನಾರು ವಿಶ್ವನಾಥ ಆಳ್ವ, ಶ್ರೀಧರ ಶೆಟ್ಟಿ ಮುಟ್ಟಂ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿರುವರು.
ಬಳಿಕ ಪ್ರಸಿದ್ದಕಲಾವಿದರಿಂದ ಚೂಡಾಮಣಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ ಶೆಟ್ಟಿ, ಗಿರೀಶ ರೈ ಕಕ್ಕೆಪದವು, ಚೆಂಡೆ ಮದ್ದಳೆಗಳಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು, ಗುರುಪ್ರಸಾದ್ ಬೊಳಿಂಜಡ್ಕ, ಹಾಗೂ ಪಾತ್ರವರ್ಗದಲ್ಲಿ ರಾಧಾಕೃಷ್ಣ ನಾವಡ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಮನೀಶ್ ಪಾಟಾಳಿ, ಲಕ್ಷ್ಮಣ ಕುಮಾರ್ ಮರಕಡ, ದಿನೇಶ್ ಕೋಡಪದವು, ರಕ್ಷಿತ್ ದೇಲಂಪಾಡಿ ಭಾಗವಹಿಸಲಿದ್ದಾರೆ ಎಂದು ಪಟ್ಲ ಫೌಂಡೆಶನ್ ಪ್ರಕಟಣೆ ತಿಳಿಸಿದೆ.