ಬದಿಯಡ್ಕ: ಸುತ್ತಲಿನ ವಿದ್ಯಮಾನಗಳನ್ನು ಏನು ಏಕೆ ಎಂದು ಪ್ರಶ್ನಿಸಿ ಉತ್ತರ ಕಂಡುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ನುಡಿದರು.
ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗುವುದು ಎಂದು ಅವರು ಆಶಿಸಿದರು.ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಅವರು ಮಾತನಾಡಿ, ನಮ್ಮ ಊರಿನ ಪ್ರತಿಭೆಗಳು ಇಂದು ಇಸ್ರೋ ದಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಜ್ಞಾನದಲ್ಲಿ ಹೆಚ್ಚಿನ ಕಲಿಕೆಗೆ ಗಮನಕೊಟ್ಟರೆ ಅಪಾರವಾದದ್ದನ್ನು ಸಾಧಿಸಬಹುದು ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಪ್ರಮೋದ ಕುಮಾರ್ ಸ್ವಾಗತಿಸಿ ಶಿಕ್ಷಕ ಶ್ರೀಧರ ಭಟ್ ಬೀಡುಬೈಲ್ ವಂದಿಸಿದರು. ಚಂದ್ರನ ಮೇಲೆ ಮನುಷ್ಯ ಕಾಲಿರಿಸಿ ಐವತ್ತು ವರ್ಷ ತುಂಬುವ ಹಿನ್ನಲೆಯಲ್ಲಿ ಕೇರಳ ವಿಜ್ಞಾನ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲ್ಪಟ್ಪು ಬೆಳಕು, ಚಂದ್ರ, ನಕ್ಷತ್ರ, ಕಾಲಗಣನೆ, ಬಾಹ್ಯಾಕಾಶ, ಸೌರವ್ಯೂಹ ಬಗ್ಗೆ ಹಾಡು,ಪ್ರಯೋಗ,ಮಾದರಿ ಹಾಗೂ ಉಪಕರಣ ನಿರ್ಮಾಣ,ನಾಟಕಾಭಿನಯ,ಸೃಜನಶೀಲ ರಚನೆ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸಲಾಗಿದ್ದು ಉಪಜಿಲ್ಲೆಯ 250ರಷ್ಟು ಮಕ್ಕಳು ಪಾಲ್ಗೊಂಡಿದ್ದರು. ಚಂದ್ರಶೇಖರ, ರಿಶಾದ್, ಶ್ರೀದೇವಿ, ವಿದ್ಯಾ, ಮಮತಾ, ಚಂದ್ರಪ್ರಭಾ, ಅಸೀಸ್, ಬಿನೋಯ್, ಚಂದ್ರಾವತಿ,ವಿಜಯ್, ಪಲ್ಲವಿ, ಸತೀಶ, ಪ್ರೆಸಿಲ್ಲಾ ನೇತೃತ್ವವಹಿಸಿದರು.