ಕುಂಬಳೆ: ಶಬರಿಮಲೆ ಆಚಾರ ,ಹಿಂದೂ ಧಾರ್ಮಿಕತೆಯಲ್ಲಿ ಎಡರಂಗ ಸರಕಾರ ದಬ್ಬಾಳಿಕೆ ಹಾಗೂ ಪೊಲೀಸ್ ಬಲದಲ್ಲಿ ವಾಮಮಾರ್ಗದಲ್ಲಿ ಮವೋವಾದಿ ಸ್ತ್ರೀಯರನ್ನು ಸನ್ನಿಧಿಗೆ ಪ್ರವೇಶಿಸಿದ ಸರಕಾರದ ಕ್ರಮ ಖಂಡಿಸಿ ಬಿಜೆಪಿ ಹಾಗೂ ಅಯ್ಯಪ್ಪ ಕರ್ಮ ಸಮಿತಿ ಗುರುವಾರ ಕರೆನೀಡಿದ ಕೇರಳ ಹರತಾಳದ ಸಂದರ್ಭ ನಾಮಜಪದಲ್ಲಿ ಶಾಂತಿಯುತ, ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರುಗಳ ಮೇಲೆ ಎಡರಂಗದ ಆಜ್ಞೆಯಂತೆ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿರೋಧ ತೋರುತ್ತಿರುವುದು ಕೋಮುಗಲಭೆ ನಡೆಸುವ ಪೂರ್ವ ನಿಯೋಜಿತ ಎಡರಂಗದ ತಂತ್ರ ಆಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಭಿಪ್ರಾಯಪಟ್ಟಿದೆ.
ಮಂಡಲ ವ್ಯಾಪ್ತಿಯಲ್ಲಿ ಮಂಜೇಶ್ವರ ಹಾಗೂ ಕುಂಬಳೆ ಪೊಲೀಸ್ ಠಾಣೆಗಳು ನಿಷ್ಕ್ರಿಯವಾಗಿದ್ದು ಕೇವಲ ಹಿಂದುಗಳನ್ನು ಬಂಧಿಸಿ ಪಿಡಿಸುತ್ತಿದೆ. ಪ್ರತಿಭಟನಾ ನಿರತ ಹಿಂದುಗಳ ಮೇಲೆ ಆಕ್ರಮಣ ಮಾಡಿದ ಇಸ್ಲಾಂ ಮೂಲಭೂತ ವಾದಿಗಳನ್ನು ಬಂಧಿಸಿಲ್ಲ. ಪೋಲಿಸ್ ಇಲಾಖೆ ಸಿಪಿಎಂ ಪಕ್ಷದ ಕಚೇರಿಯಿಂದ ಬರುವ ಅಜ್ಞಾಯಂತೆ ಮಾತ್ರ ವರ್ತಿಸುತ್ತಿದೆ. ಎಸ್‍ಡಿಪಿಐ ಎಡರಂಗ ಕ್ಕೆ ಬೆಂಬಲ ನೀಡಿರುವುದು ಸ್ತ್ರಿ ಪ್ರವೇಶ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಆಗಬೇಕೆಂಬ ಎಡರಂಗಕ್ಕೆ ಬೆಂಬಲವೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಸರಕಾರದ ಉದ್ಧಟತನ ಅದರ ನಾಶಕ್ಕೆ ಕಾರಣವಾಗಲಿದೆ. ಭಕ್ತರ ನಂಬಿಕೆ ಆಚಾರಗಳ ಸಂರಕ್ಷಣೆ ಅಡಳಿತ ಪಕ್ಷದ ಹೊಣೆಯಾಗಿದೆ ಎಂದು ಬಿಜೆಪಿ ತಿಳಿಸಿದೆ. ಕುಂಬಳೆ, ವರ್ಕಾಡಿ, ಬಾಯರ್, ಪೈವಳಿಕೆಗಳಲ್ಲಿ ಗುರುವಾರ ಆಗಿರುವ ಅಹಿತರಕರ ಘಟನೆಯಲ್ಲಿ ಪೊಲೀಸ್ ಇಲಾಖೆ ತಾರತಮ್ಯ ಅನುಸರಿಸಿದೆ. ಇದು ಖಂಡನೀಯ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.